ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಂತಾರಾಷ್ಟ್ರೀಯ ವನ್ಯಜೀವಿ ಚೋರರ ಸೆರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂತಾರಾಷ್ಟ್ರೀಯ ವನ್ಯಜೀವಿ ಚೋರರ ಸೆರೆ
ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳಸಾಗಣೆದಾರರನ್ನು ಬಂಧಿಸಿರುವ ನಗರ ರೈಲ್ವೇ ಮತ್ತು ಅರಣ್ಯ ಇಲಾಖೆ ಪೊಲೀಸರು ಆರೋಪಿಗಳಿಂದ 25 ಲಕ್ಷ ರೂ. ಬೆಲೆಯ 15 ಕೆಜಿ ಸಮುದ್ರದ ಹವಳ, 3 ವಿದೇಶಿ ಗಿಳಿಗಳನ್ನು ವಶಪಡಿಸಿಕೊಂಡಿದ್ದಾರೆ.

ತಿರುಚಿಯ ಅಂತಾರಾಷ್ಟ್ರೀಯ ವನ್ಯಜೀವಿ ಕಳ್ಳ ಸಾಗಣೆದಾರ ದೇವದತ್ ಎನ್ ಸಾತಮಣಿ (48), ಹಲಸೂರಿನ ರಫಿ ಅಹಮಮದ್ ಖಾನ್ (30) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ನಗರ ರೈಲು ನಿಲ್ದಾಣದಲ್ಲಿ ಮುಂಗಡ ಕಾಯ್ದಿರಿಸುವಿಕೆಯ ಕೌಂಟರ್‌‌ನಲ್ಲಿ ಪಾರ್ಸಲ್ ಬುಕ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಸಾತಮಣಿ ಪ್ರಾಣಿ ಪಕ್ಷಗಳ ಅಂತಾರಾಷ್ಟ್ರೀಯ ಕಳ್ಳ ಸಾಗಣೆದಾರ. ಈತನಿಗಾಗಿ ಇಂಟರ್‌ಪೋಲ್ ಪೊಲಿಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಗಿಳಿಗಳನ್ನು ಮಾರುಕಟ್ಟೆಯಲ್ಲಿ ತಲಾ 35 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅನಂತಮೂರ್ತಿ ಬಗ್ಗೆ ಜನತೆಗೆ ಗೊತ್ತಿದೆ: ಡಿ.ವಿ
ಸಿದ್ದರಾಮಯ್ಯ ಪರ ಬಲ ಪ್ರದರ್ಶನ: ವರ್ತೂರು
ಗೌಡರು 2 ಬಾರಿ ಸಿಎಂ ಗಾದಿ ತಪ್ಪಿಸಿದ್ದರು: ಸಿದ್ದು
ಜ.16ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
700 ರೂ.ಗೆ ರಾಜ್ಯಾದ್ಯಂತ ಪ್ರವಾಸ...
ವಿದ್ಯುತ್ ಸಮಸ್ಯೆ: ರೈತ ನೇಣಿಗೆ ಶರಣು