ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕಾನೂನು ಪ್ರಾಧಿಕಾರದಿಂದ ಜನರ ಬಳಿಗೆ 'ನ್ಯಾಯಾಲಯ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾನೂನು ಪ್ರಾಧಿಕಾರದಿಂದ ಜನರ ಬಳಿಗೆ 'ನ್ಯಾಯಾಲಯ'
ಸಾಮಾನ್ಯ ಜನರಿಗೆ ಕಾನೂನಿನ ನೆರವು ನೀಡಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವಿಶಿಷ್ಟ ಯೋಜನೆಯೊಂದನ್ನು ಹಮ್ಮಿಕೊಂಡಿದೆ.

'ಸಾಕ್ಷರತಾ ರಥ' ಎಂಬ ವಿನೂತನ ಯೋಜನೆ ರೂಪಿಸಿದೆ. ಈ ರಥವನ್ನು ನ.22 ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಉದ್ಘಾಟಿಸಲಿದ್ದಾರೆ.

ಸುಮಾರು ಒಂದು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಈ ವಾಹನದ ಒಳಭಾಗವನ್ನು ಕೋರ್ಟ್ ಮಾದರಿಯಲ್ಲೇ ಸಜ್ಜುಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ಇರುವಂತೆ ಗ್ರಂಥಾಲಯ, ಕಂಪ್ಯೂಟರ್, ವಿಚಾರಣೆ ನಡೆಸಲು ವ್ಯವಸ್ಥೆಗಳನ್ನು ಕೂಡಾ ಮಾಡಲಾಗಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ವಿ.ಗೋಪಾಲಗೌಡ ತಿಳಿಸಿದ್ದಾರೆ.

ಈ ರಥದ ಜೊತೆಗೆ ತೆರಳುವ ಕಾನೂನು ತಜ್ಞರು ಕೆಲವು ಸಣ್ಣಪುಟ್ಟ ವ್ಯಾಜ್ಯಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಈ ರಥದಲ್ಲಿ ಸುಮಾರು 80 ವಕೀಲರು ತೆರಳಲಿದ್ದಾರೆ. ಬೀದರ್‌‌ನಿಂದ ಇದರ ಸಂಚಾರ ಆರಂಭವಗೊಂಡು ಕ್ರಮೇಣ ರಾಜ್ಯದ ಎಲ್ಲ ಭಾಗಗಳಿಗೂ ಇದು ತೆರಳಿ ಸೇವೆ ನೀಡಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಂತಾರಾಷ್ಟ್ರೀಯ ವನ್ಯಜೀವಿ ಚೋರರ ಸೆರೆ
ಅನಂತಮೂರ್ತಿ ಬಗ್ಗೆ ಜನತೆಗೆ ಗೊತ್ತಿದೆ: ಡಿ.ವಿ
ಸಿದ್ದರಾಮಯ್ಯ ಪರ ಬಲ ಪ್ರದರ್ಶನ: ವರ್ತೂರು
ಗೌಡರು 2 ಬಾರಿ ಸಿಎಂ ಗಾದಿ ತಪ್ಪಿಸಿದ್ದರು: ಸಿದ್ದು
ಜ.16ರಿಂದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
700 ರೂ.ಗೆ ರಾಜ್ಯಾದ್ಯಂತ ಪ್ರವಾಸ...