ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರು: 80 ಲಕ್ಷ ರೂ.ಅಫೀಮ್ ವಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರು: 80 ಲಕ್ಷ ರೂ.ಅಫೀಮ್ ವಶ
ಇಬ್ಬರು ಅಂತಾರಾಜ್ಯ ಮಾದಕ ವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆರೋಪಿಗಳಿಂದ 80 ಲಕ್ಷ ರೂ. ಮೌಲ್ಯದ 10 ಕೆಜಿ ಅಫೀಮ್ ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನ ಮೂಲದ ಅನಿಲ್(35), ಕಬ್ಬನ್‌‌ಪೇಟೆಯ ಗೋವಿಂದರಾಜ್ (23) ಬಂಧಿತರು. ಹಲಸೂರು ಗೇಟ್ ವ್ಯಾಪ್ತಿಯಲ್ಲಿ ಆರೋಪಿಗಳು ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಆರೋಪಿಗಳು ಭಾರಿ ಪ್ರಮಾಣದ ಅಫೀಮನ್ನು ಹೈದರಾಬಾದಿನ ಸೋಹನ್‌‌ಲಾಲ್, ಮೋಹನ್‌‌ಲಾಲ್ ಹಾಗೂ ಭರತ್ ಎಂಬವರಿಂದ ಖರೀದಿಸಿದ್ದರು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ, ನಗರದ ಹಲವು ಕಡೆ ಅಫೀಮು ಮಾರಾಟ ಮಾಡುವ ಏಜೆಂಟರನ್ನು ಇರಿಸಿಕೊಂಡಿದ್ದರು ಎಂದು ವಿಚಾರಣೆ ವೇಳೆ ಬಹಿರಂಗಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ
ಸಮಾವೇಶ: ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ
ಬಿಜೆಪಿಯದ್ದು ಗೂಂಡಾ ಸಂಸ್ಕೃತಿ: ಕುಮಾರಸ್ವಾಮಿ
ನಕ್ಸಲ್ ನಿಗ್ರಹಕ್ಕೆ ಆಧುನಿಕ ಶಸ್ತ್ರಾಸ್ತ್ರ: ಸಿಎಂ
ಆಸ್ನೋಟಿಕರ್ ಪ್ರಕರಣ: ಎಸಿ ಎತ್ತಂಗಡಿ
ಉತ್ತಮ ಸೇವೆಯಿಂದ ಜನಮಾನ್ಯತೆ: ಠಾಗೋರ್