ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಇ-ಆಡಳಿತಕ್ಕೆ ತಜ್ಞರ ಸಮಿತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇ-ಆಡಳಿತಕ್ಕೆ ತಜ್ಞರ ಸಮಿತಿ
ರಾಜ್ಯದಲ್ಲಿ ಇ-ಆಡಳಿತ ನಿರ್ವಹಣೆಗೆ ಅಗತ್ಯ ಸಲಹೆ-ಸೂಚನೆ ನೀಡಲು ರಾಜ್ಯ ಸರ್ಕಾರ ತಜ್ಞರ ಸಮಿತಿಯೊಂದನ್ನು ರಚಿಸಿದೆ.

ಪಾರದರ್ಶಕ ಮತ್ತು ಸಮರ್ಥ ಆಡಳಿತ ನೀಡಲು ರಚಿಸಲಾಗಿರುವ ಸಮಿತಿ, ದೇಶದಲ್ಲಿ ಇ-ಆಡಳಿತದಲ್ಲಿ ರಾಜ್ಯವನ್ನು ಮುಂಚೂಣಿಗೆ ತರಲು ಅಗತ್ಯ ಮಾರ್ಗಸೂಚಿ ತಯಾರಿಸಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

2020ರ ದೂರದೃಷ್ಟಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ದೀರ್ಘಕಾಲೀನ ಮತ್ತು ಅಲ್ಪಕಾಲೀನ ಕಾರ್ಯತಂತ್ರವನ್ನು ರೂಪಿಸುವುದು, ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮೈಲಿಗಲ್ಲು ರೂಪಿಸುವುದು, ಇ-ಆಡಳಿತದ ಅನುಷ್ಠಾನವನ್ನು ವಿವಿಧ ಹಂತಗಳಲ್ಲಿ ಮೇಲ್ವಿಚಾರಣೆ ನೋಡಿಕೊಳ್ಳುವುದು ಸಮಿತಿಯ ಜವಾಬ್ದಾರಿ.

ಸಮಿತಿಯ ವಿವರ: ಇನ್ಫೋಸಿಸ್‌‌ನ ನಂದನ್ ನೀಲೇಕಣಿ, ನಿರ್ದೇಶಕ ಮೋಹನ್‌‌ದಾಸ್ ಪೈ, ಗ್ಲೋಬಲ್ ಎಡ್ಜ್ ಸಾಫ್ಟ್‌‌ವೇರ್‌ನ ಎಂ.ಪಿ.ಕುಮಾರ್, ಇ-ಆಡಳಿತದ ಸಲಹೆಗಾರ ಮಹಾಬಲೇಶ್ವರ ಹೆಗಡೆ, ಐಐಐಟಿ ನಿರ್ದೇಶಕ ಪ್ರೊ. ಸಡಗೋಪನ್, ಬ್ರಿಕ್ವರ್ಕ್ ಅಧ್ಯಕ್ಷ ವಿವೇಕ್ ಕುಲಕರ್ಣಿ, ಇ-ಗವರ್ನಮೆಂಟ್ ಪೌಂಡೇಶನ್ ಶ್ರೀಕಾಂತ್ ನಾದಮುನಿ ಸಮಿತಿಯಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು: 80 ಲಕ್ಷ ರೂ.ಅಫೀಮ್ ವಶ
ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ
ಸಮಾವೇಶ: ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ
ಬಿಜೆಪಿಯದ್ದು ಗೂಂಡಾ ಸಂಸ್ಕೃತಿ: ಕುಮಾರಸ್ವಾಮಿ
ನಕ್ಸಲ್ ನಿಗ್ರಹಕ್ಕೆ ಆಧುನಿಕ ಶಸ್ತ್ರಾಸ್ತ್ರ: ಸಿಎಂ
ಆಸ್ನೋಟಿಕರ್ ಪ್ರಕರಣ: ಎಸಿ ಎತ್ತಂಗಡಿ