ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚೆನ್ನಿಗಪ್ಪ ಹಲ್ಲೆ ತನಿಖೆಗೆ ವಿಶೇಷ ತಂಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೆನ್ನಿಗಪ್ಪ ಹಲ್ಲೆ ತನಿಖೆಗೆ ವಿಶೇಷ ತಂಡ
ಮಾಜಿ ಸಚಿವ ಚೆನ್ನಿಗಪ್ಪ ಅವರ ಮೇಲೆ ಜೆಡಿಎಸ್ ಸಮಾವೇಶದಂದು ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗಾಗಿ ಎರಡು ಪೊಲೀಸ್ ತಂಡ ರಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವಿಭಾಗದ ಡಿಸಿಪಿ ರಮೇಶ್ ನೇತೃತ್ವದಲ್ಲಿ ಎರಡು ವಿಶೇಷ ತಂಡವನ್ನು ರಚಿಸಲಾಗಿದ್ದು, ತಂಡಗಳು ಚೆನ್ನಿಗಪ್ಪ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗಾಗಿ ಶೋಧ ಆರಂಭಿಸಿದೆ.

ಚೆನ್ನಿಗಪ್ಪ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳು ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಮಂಡ್ಯ ಜಿಲ್ಲೆಗೆ ಸೇರಿದವರು ಎನ್ನಲಾಗಿದ್ದು, ಆರೋಪಿಗಳ ಪತ್ತೆಗಾಗಿ ಈ ವಿಶೇಷ ತಂಡ ಜಿಲ್ಲೆಗೆ ತೆರಳಲಿದೆ.

ಚೆನ್ನಿಗಪ್ಪ ಹಾಗೂ ಅವರ ಕಾರಿನ ಚಾಲಕ, ಸ್ನೇಹಿತರ ಮೇಲೆ ಹಲ್ಲೆ ನಡೆಸಿ, ಚೆನ್ನಿಗಪ್ಪ ಅವರ ಬೆಲೆಬಾಳುವ ವಾಚ್ ಹಾಗೂ ಚಿನ್ನದ ಸರ ಅಪಹರಿಸಲಾಗಿತ್ತು. ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರಪ್ಪ ಹೇಳಿಕೆಗೆ ಜಗ್ಗೇಶ್ ತಿರುಗೇಟು
ಇ-ಆಡಳಿತಕ್ಕೆ ತಜ್ಞರ ಸಮಿತಿ
ಬೆಂಗಳೂರು: 80 ಲಕ್ಷ ರೂ.ಅಫೀಮ್ ವಶ
ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ
ಸಮಾವೇಶ: ಮಾಹಿತಿ ನೀಡಲು ಸರ್ಕಾರಕ್ಕೆ ಸೂಚನೆ
ಬಿಜೆಪಿಯದ್ದು ಗೂಂಡಾ ಸಂಸ್ಕೃತಿ: ಕುಮಾರಸ್ವಾಮಿ