ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೆಬ್ಬಾಳದಲ್ಲಿ ಸಚಿವರಿಗಾಗಿ ಐಷಾರಾಮಿ ಬಂಗಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೆಬ್ಬಾಳದಲ್ಲಿ ಸಚಿವರಿಗಾಗಿ ಐಷಾರಾಮಿ ಬಂಗಲೆ
ಸರಕಾರಿ ವಸತಿಗೃಹಗಳ ಕೊರತೆಯಿಂದ ಬಾಡಿಗೆ ಮನೆಯಗಳಲ್ಲಿ ವಾಸವಿರುವ ಸಚಿವರಿಗಾಗಿ ನಗರದ ಹೆಬ್ಬಾಳದ ಬಳಿಯ ಆಗ್ರೊ ಇಂಡಸ್ಟ್ರೀಸ್ ಕಾರ್ಪೋರೇಷನಿಗೆ ಸೇರಿದ 14.22 ಎಕರೆ ಪ್ರದೇಶದಲ್ಲಿ ವಸತಿಗೃಹ ನಿರ್ಮಿಸಲು ಸರಕಾರ ನಿರ್ಧರಿಸಿದೆ.

ತಲಾ ಒಂದೊಂದು ವಸತಿ ಗೃಹ 10 ಸಾವಿರ ಚದರಡಿ ವಿಸ್ತೀರ್ಣ ಪ್ರದೇಶದಲ್ಲಿ ಐಷಾರಾಮಿ ಬಂಗಲೆಗಳು ತಲೆ ಎತ್ತಲಿದೆ. ಜತೆಗೆ ಬೃಹತ್ ಉದ್ಯಾನವನ ಹಾಗೂ ಇತರ ಸೌಲಭ್ಯಗಳನ್ನು ಕಲ್ಪಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದೆ.

ಸದ್ಯಕ್ಕೆ ಹೈಗ್ರೌಂಡ್ಸ್ ಹಾಗೂ ಜಯಮಹಲ್ ಸೇರಿದಂತೆ ಒಟ್ಟಿ 18 ವಸತಿಗೃಹಗಳು ಸಚಿವರ ಬಳಕೆಗಾಗಿ ಇವೆ. ಇವುಗಳಲ್ಲಿ ಕೆಲವನ್ನು ಹೈಕೋರ್ಟ್ ನ್ಯಾಯಾಧೀಶರ ವಾಸ್ತವ್ಯಕ್ಕೆ ನೀಡಲಾಗಿದೆ.

ಸಂಪುಟದ 34 ಸದಸ್ಯರಲ್ಲಿ ಅನೇಕರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಚಿವರ ಭದ್ರತೆ ಹಾಗೂ ಒಂದೆಡೆ ಸರಕಾರಿ ವಸತಿಗೃಹಗಳನ್ನು ನಿರ್ಮಿಸವ ಉದ್ದೇಶದಿಂದ ಬಿಜೆಪಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ನಷ್ಟದ ಹಿನ್ನೆಲೆಯಲ್ಲಿ ಆಗ್ರೊ ಇಂಡಸ್ಟ್ರೀಸ್ ಕಾರ್ಪೋರೇಷನ್ ಮುಚ್ಚಿದೆ. ಇದನ್ನು ಸರಕಾರದ ಉದ್ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೆನ್ನಿಗಪ್ಪ ಹಲ್ಲೆ ತನಿಖೆಗೆ ವಿಶೇಷ ತಂಡ
ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್
ಉಗ್ರಪ್ಪ ಹೇಳಿಕೆಗೆ ಜಗ್ಗೇಶ್ ತಿರುಗೇಟು
ಇ-ಆಡಳಿತಕ್ಕೆ ತಜ್ಞರ ಸಮಿತಿ
ಬೆಂಗಳೂರು: 80 ಲಕ್ಷ ರೂ.ಅಫೀಮ್ ವಶ
ಗುಲ್ಬರ್ಗಾ: ಮುಂಬೈ-ಚೆನ್ನೈ ರೈಲು ದರೋಡೆ