ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೀರಿಗೆ ಮೀಟರ್ ಕಡ್ಡಾಯ: ಕಟ್ಟಾ ಸುಬ್ರಹ್ಮಣ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೀರಿಗೆ ಮೀಟರ್ ಕಡ್ಡಾಯ: ಕಟ್ಟಾ ಸುಬ್ರಹ್ಮಣ್ಯ
ಬೆಂಗಳೂರು ನಗರದಲ್ಲಿ ಅನಧಿಕೃತವಾಗಿ ನೀರಿನ ಸಂಪರ್ಕ ಕಲ್ಪಿಸಿಕೊಳ್ಳುವವರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ನೀರಿನ ಸಂಪರ್ಕಕ್ಕೆ ಏಕಕಾಲದಲ್ಲಿ ಮೀಟರ್ ಅಳವಡಿಸಲು ಸರಕಾರ ತೀರ್ಮಾನ ಕೈಗೊಂಡಿದೆ ಎಂದು ಅಬಕಾರಿ ಮತ್ತು ನೀರು ಸರಬರಾಜು ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಚಿತವಾಗಿ ಮೀಟರ್ ಅಳವಡಿಸುವಾಗ ಅನಧಿಕೃತ ಸಂಪರ್ಕಕ್ಕೆ ದಂಡ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೊಳಗೇರಿ ಸೇರಿದಂತೆ ನಗರ ಪ್ರದೇಶದ ಬಡವರು ಸುಮಾರು 85ಸಾವಿರ ಅನಧಿಕೃತ ಸಂಪರ್ಕ ಹೊಂದಿದ್ದಾರೆ. ಅನಧಿಕೃತ ಸಂಪರ್ಕದ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದು, ಗಡುವಿನೊಳಗೆ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯುತ್ ಕದ್ದರೆ ಕ್ರಿಮಿನಲ್ ದಾವೆ: ಯಡಿಯೂರಪ್ಪ
ಹೆಬ್ಬಾಳದಲ್ಲಿ ಸಚಿವರಿಗಾಗಿ ಐಷಾರಾಮಿ ಬಂಗಲೆ
ಚೆನ್ನಿಗಪ್ಪ ಹಲ್ಲೆ ತನಿಖೆಗೆ ವಿಶೇಷ ತಂಡ
ಸಿದ್ದರಾಮಯ್ಯಗೆ ಹೈಕಮಾಂಡ್ ಬುಲಾವ್
ಉಗ್ರಪ್ಪ ಹೇಳಿಕೆಗೆ ಜಗ್ಗೇಶ್ ತಿರುಗೇಟು
ಇ-ಆಡಳಿತಕ್ಕೆ ತಜ್ಞರ ಸಮಿತಿ