ನಕ್ಸಲ್ ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿಯಲ್ಲಿ ಬಲಿಯಾದ ಕೊಡಗಿನ ಪೊಲೀಸ್ ಕಾನ್ಸ್‌ಟೇಬಲ್ ಗುರುಪ್ರಸಾದ್ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವದೊಂದಿಗೆ ಗುರುವಾರ ನೆರವೇರಿತು.
ಉಪಸಭಾಪತಿ ಕೆ.ಜಿ.ಬೋಪಯ್ಯ, ಕೆಎಸ್ಆರ್‌ಪಿ ಡಿಐಜಿ ಕೆಂಪಯ್ಯ, ಉಪ ಆಯುಕ್ತ ಬಲದೇವಕೃಷ್ಣ, ಪ್ರಧಾನ ಕಚೇರಿ ಸಹಾಯಕ ಚಿಕ್ಕತಮ್ಮಯ್ಯ ಹಾಗೂ ಎಸ್ಪಿ ಸುರೇಶ್ ಮೃತ ಗುರುಪ್ರಸಾದ್‌ಗೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಗುರುಪ್ರಸಾದ್ ಪಾರ್ಥಿವ ಶರೀರ ಬುಧವಾರ ರಾತ್ರಿ ಸುಮಾರು 10.15ಕ್ಕೆ ಮನೆ ತಲುಪುತ್ತಿದ್ದಂತೆ ಮನೆಯವರ ರೋದನ ಮುಗಿಲು ಮುಟ್ಟಿತ್ತು.
ನಕ್ಸಲರನ್ನು ಇಲಾಖೆ ಸಂಪೂರ್ಣವಾಗಿ ಹತ್ತಿಕ್ಕಲಿದೆ ಎಂದು ಡಿಐಜಿ ಕೆಂಪಯ್ಯ ಹೇಳಿದರು. ಮೃತ ಕಾನ್ಸ್‌ಟೇಬಲ್ ಕುಟುಂಬಕ್ಕೆ ಸರಕಾರ ಘೋಷಿಸಿರುವ 5 ಲಕ್ಷ ರೂ. ಶೀಘ್ರವೇ ತಲುಪಿಸಲಾಗುವುದು ಎಂದು ಅವರು ಹೇಳಿದರು.
ನರಹಂತಕ ಕಾಡುಗಳ್ಳ ವೀರಪ್ಪನ್ ಹಿಡಿಯುವ ಕಾರ್ಯಾಚರಣೆಯಲ್ಲೂ ಗುರುಪ್ರಸಾದ್ ಪಾಲ್ಗೊಂಡಿದ್ದರು. |