ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ >  ಸರಕಾರಿ ಶಾಲೆಗಳ ಅಧ್ಯಯನ: ಕಾಗೇರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರಿ ಶಾಲೆಗಳ ಅಧ್ಯಯನ: ಕಾಗೇರಿ
ಬೆಂಗಳೂರು ನಗರ ವ್ಯಾಪ್ತಿಯ ಸರಕಾರಿ ಶಾಲೆಗಳ ಸ್ಥಿತಿಗತಿ ಅಧ್ಯಯನ ನಡೆದಿದ್ದು, ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮಗೊಳಿಸಲು ಯೋಜನೆ ರೂಪಿಸಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಕೇವಲ ಮೂಲಭೂತ ಸೌಲಭ್ಯ ಕಲ್ಪಿಸುವುದು ಪರಿಪೂರ್ಣತೆಯ ಅಳತೆಗೋಲಲ್ಲ. ಆಧುನಿಕ ಬದುಕಿನ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವಂತೆ ಶಿಕ್ಷಕರ ಬೌದ್ದಿಕ ಮಟ್ಟವನ್ನು ಸಿದ್ಧಗೊಳಿಸಬೇಕಿದೆ. ಜತೆಗೆ ಭಾರತೀಯ ಸಂಸ್ಕೃತಿ ಉದಾತ್ತಗುಣಗಳನ್ನು ಮಕ್ಕಳಲ್ಲಿ ಬೆಳೆಸುವ ನಿಟ್ಟಿನಲ್ಲಿ ಯೋಚಿಸಬೇಕಿದೆ ಎಂದರು.

ಆಡಳಿತದಲ್ಲಿ ಹಳೆತನವಿದ್ದರೆ ಜನರು ಸಹಿಸುವುದಿಲ್ಲ. ಹೊಸ ಆಡಳಿತವೆಂದರೆ ವಿಧಾನಸೌಧದ ಕುರ್ಚಿಗಳಲ್ಲಿ ಕೂರುವವರು ಬದಲಾಗುವುದಷ್ಟೇ ಅಲ್ಲ. ಅಧಿಕಾರಿಗಳ ಕಾರ್ಯ ವೈಖರಿಯಲ್ಲಿ ಬದಲಾವಣೆಯಾಗಬೇಕು. ಪ್ರತಿ ಕ್ಷೇತ್ರಗಳ ಕೊರತೆಗಳನ್ನು ತುಂಬುವಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.ಸಮಾಜಕ್ಕೆ ಏನಾದರೂ ನೀಡಬೇಕೆಂಬ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಬೆಳೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರಕಾರಿ ಗೌರವದೊಂದಿಗೆ ಗುರುಪ್ರಸಾದ್ ಅಂತ್ಯಕ್ರಿಯೆ
ಕಾನೂನುಬಾಹಿರ ಬಂಧನ-ಠಾಣೆಗೆ ಐಜಿಪಿ ದಾಳಿ
ನ. 28: ಸರಕಾರದ ವಿರುದ್ಧ ಜೆಡಿಎಸ್ ಪ್ರತಿಭಟನೆ
ಬಂಗ್ಲೆ ನಿರ್ಮಾಣ: ಪ್ರತಿಪಕ್ಷಗಳಿಂದ ಅಪಸ್ವರ
ಆತ್ಮಹತ್ಯೆ:ಆರೋಪಿಗಳಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು
ಎನ್‌ಕೌಂಟರ್: ಇಬ್ಬರು ನಕ್ಸಲ್‌ರ ಗುರುತು ಪತ್ತೆ