ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೌರಿಂಗ್ ಆಸ್ಪತ್ರೆಯಲ್ಲಿ ಪಾಂಡೆ ಮಂಪರು ಪರೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೌರಿಂಗ್ ಆಸ್ಪತ್ರೆಯಲ್ಲಿ ಪಾಂಡೆ ಮಂಪರು ಪರೀಕ್ಷೆ
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿಯಾಗಿರುವ ದಯಾನಂದ ಪಾಂಡೆಗೆ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆ ನಡೆಯುತ್ತಿದ್ದು, ಮಹತ್ವದ ಅಂಶಗಳು ಬಯಲಾಗುವ ಸಾಧ್ಯತೆಗಳು ಇರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಪ್ರಕರಣದ ಪ್ರಮುಖ ಶಂಕಿತ ಆರೋಪಿಯಾಗಿರುವ ದಯಾನಂದ ಪಾಂಡೆಯನ್ನು ಮುಂಬೈ ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಅಧಿಕಾರಿಗಳು ಮಂಪರು ಪರೀಕ್ಷೆಗಾಗಿ ಇಂದು ಬೆಳಿಗ್ಗೆ ಬೆಂಗಳೂರಿಗೆ ಕರೆ ತಂದಿದ್ದರು.

ಬೆಳಿಗ್ಗೆ 11ಗಂಟೆಗೆ ಪಾಂಡೆಯ ಮಂಪರು ಪರೀಕ್ಷೆ ಆರಂಭಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸಂಜೆಯ ವೇಳೆಗೆ ಮಂಪರು ಪರೀಕ್ಷೆ ಅಂತಿಮಗೊಳ್ಳಲಿದ್ದು, ಬಳಿಕ ವಿವರವನ್ನು ನೀಡುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಂಡೆ ಮಂಪರು ಪರೀಕ್ಷೆಯ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಯ ಸುತ್ತ-ಮುತ್ತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ದಯಾನಂದ ಪಾಂಡೆಯಿಂದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ಲಭಿಸುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಡಿಯೂರಪ್ಪ ಸುಳ್ಳಿನ ಸರದಾರ: ಉಗ್ರಪ್ಪ
ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಮರೆತುಹೋದ ಸ್ಫೋಟ: ವಿಚಾರಣೆಗೆ ಬಿದರಿ ಸಾರಥ್ಯ!
ಸರಕಾರಿ ಶಾಲೆಗಳ ಅಧ್ಯಯನ: ಕಾಗೇರಿ
ಸರಕಾರಿ ಗೌರವದೊಂದಿಗೆ ಗುರುಪ್ರಸಾದ್ ಅಂತ್ಯಕ್ರಿಯೆ
ಕಾನೂನುಬಾಹಿರ ಬಂಧನ-ಠಾಣೆಗೆ ಐಜಿಪಿ ದಾಳಿ