ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಚರ್ಚ್ ಸ್ಫೋಟ: 23 ಮಂದಿ ಆರೋಪ ಸಾಬೀತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚರ್ಚ್ ಸ್ಫೋಟ: 23 ಮಂದಿ ಆರೋಪ ಸಾಬೀತು
ಬೆಂಗಳೂರು: ಗುಲ್ಬರ್ಗ, ಹುಬ್ಬಳ್ಳಿ ಹಾಗೂ ಬೆಂಗಳೂರಿನ ಚರ್ಚ್‌ಗಳಲ್ಲಿ 8ವರ್ಷದ ಹಿಂದೆ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ದೀನ್‌ದಾರ್ ಅಂಜುಮಾನ್ ಸಂಘಟನೆಯ 23ಮಂದಿ ದೋಷಿತರೆಂದು ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

2000ರಲ್ಲಿ ಬೆಂಗಳೂರಿನ ಜೆಸಿ ನಗರ, ಹುಬ್ಬಳ್ಳಿ ಹಾಗೂ ಗುಲ್ಬರ್ಗಾ ವಾಡಿಯಲ್ಲಿನ ಚರ್ಚ್ ಸ್ಫೋಟ ಪ್ರಕರಣದಲ್ಲಿ ಒಟ್ಟು 85ಮಂದಿ ವಿರುದ್ಧ ದೋಷಪಟ್ಟಿ ಸಲ್ಲಿಸಲಾಗಿದ್ದು, ಅದರಲ್ಲಿ 23 ಮಂದಿ ದೋಷಿತರು ಎಂದು ನ್ಯಾಯಾಲಯ ತೀರ್ಪು ನೀಡಿ, ನಾಲ್ಕು ಮಂದಿಯನ್ನು ಖುಲಾಸೆಗೊಳಿಸಿದೆ. ಸ್ಫೋಟದಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲವಾಗಿತ್ತು.

ಪ್ರಕರಣದಲ್ಲಿ ದೋಷಿತರಾದವರಿಗೆ ಶನಿವಾರ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುವುದು ಎಂದು ವಿಶೇಷ ನ್ಯಾಯಾಲಯದ ನ್ಯಾಯಪೀಠ ತಿಳಿಸಿದೆ.

ಪ್ರಕರಣಕ್ಕೆ ಸಂಬಧಿಸಿದಂತೆ ಪ್ರಮುಖ 15 ಮಂದಿ ತಲೆಮರೆಸಿಕೊಂಡಿದ್ದು, ಅವರಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತಾದರೂ ಅವರಾರು ಪತ್ತೆಯಾಗಿರಲಿಲ್ಲ.

ನಗರದ ಮಿನರ್ವ್ ಮಿಲ್ ಸಮೀಪ ಆರೋಪಿಗಳು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಆ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು, ಘಟನೆಯಲ್ಲಿ ಬದುಕುಳಿದ ಇಬ್ರಾಹಿಂ ಎಂಬಾತನಿಂದ ಚರ್ಚ್ ಸ್ಫೋಟ ಪ್ರಕರಣದ ವಿವರ ಬಯಲುಗೊಂಡಿತ್ತು.

ನ್ಯಾಯಾಧೀಶರಿಗೆ ಬೆದರಿಕೆ: ಚರ್ಚ್ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಮತ್ತು ಸರಕಾರಿ ಅಭಿಯೋಜಕರಿಗೆ ಎರಡು ತಿಂಗಳ ಹಿಂದೆ ಬೆದರಿಕೆ ಪತ್ರವೊಂದು ಬಂದಿತ್ತು.

ತೀರ್ಪು ಶನಿವಾರ ಪ್ರಕಟವಾಗರುವ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯ ಆವರಣ ಮತ್ತು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಎರಡು ತಿಂಗಳ ಹಿಂದೆ ಬಂದ ಪತ್ರದಲ್ಲಿ, ದುಷ್ಕರ್ಮಿಗಳು, ತಮ್ಮ ಪರ ತೀರ್ಪು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ಕುರಿತು ಎರಡು ತಿಂಗಳ ಹಿಂದೆ ದೂರು ದಾಖಲಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲೋಕಸಭೆ: ಜೆಡಿಎಸ್‌ನಿಂದ ಅನಂತಮೂರ್ತಿ ಸ್ಪರ್ಧೆ?
ಬೌರಿಂಗ್ ಆಸ್ಪತ್ರೆಯಲ್ಲಿ ಪಾಂಡೆ ಮಂಪರು ಪರೀಕ್ಷೆ
ಯಡಿಯೂರಪ್ಪ ಸುಳ್ಳಿನ ಸರದಾರ: ಉಗ್ರಪ್ಪ
ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಮರೆತುಹೋದ ಸ್ಫೋಟ: ವಿಚಾರಣೆಗೆ ಬಿದರಿ ಸಾರಥ್ಯ!
ಸರಕಾರಿ ಶಾಲೆಗಳ ಅಧ್ಯಯನ: ಕಾಗೇರಿ