ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ
ವಿಧಾನಪರಿಷತ್ತಿನ ಎರಡು ಸ್ಥಾನಗಳಿಗೆ ಡಿ.9ರಂದು ನಡೆಯುವ ಚುನಾವಣೆ ಸಂಬಂಧ ಚುನಾವಣಾ ಆಯೋಗ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದು, ಇದರಿಂದ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಯ ಅಭ್ಯರ್ಥಿಗಳೇ ಎರಡೂ ಸ್ಥಾನಗಳನ್ನು ಗೆಲ್ಲುವುದು ಬಹುತೇಕ ಖಚಿತವಾಗಿದೆ.

ಈ ಕುರಿತು ಚುನಾವಣಾ ಆಯೋಗ ಶುಕ್ರವಾರ ಎರಡು ಅಧಿಸೂಚನೆಗಳನ್ನು ಹೊರಡಿಸಿದೆ. ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಈಗ ಚುನಾವಣೆ ನಡೆಯುತ್ತಿದ್ದು, ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.

ಈ ನಡೆಯುತ್ತಿರುವುದು ಉಪಚುನಾವಣೆಯಾದ ಕಾರಣ ಈ ರೀತಿ ಪ್ರತ್ಯೇಕ ಅಧಿಸೂಚನೆಗಳ ಮೂಲಕವೇ ಸ್ಥಾನಗಳನ್ನು ಭರ್ತಿ ಮಾಡಲಾಗುತ್ತದೆ. ಅವಧಿ ಪೂರ್ಣಗೊಂಡ ನಂತರ ನಡೆಯುವ ಸಾಮಾನ್ಯ ಚುನಾವಣೆಗಳಿಗೆ ಎಷ್ಟು ಸ್ಥಾನಗಳು ಖಾಲಿ ಇರುತ್ತವೊ ಅಷ್ಟಕ್ಕೂ ಒಂದೇ ಅಧಿಸೂಚನೆ ಹೊರಡಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚರ್ಚ್ ಸ್ಫೋಟ: 81 ಮಂದಿ ಆರೋಪ ಸಾಬೀತು
ಲೋಕಸಭೆ: ಜೆಡಿಎಸ್‌ನಿಂದ ಅನಂತಮೂರ್ತಿ ಸ್ಪರ್ಧೆ?
ಬೌರಿಂಗ್ ಆಸ್ಪತ್ರೆಯಲ್ಲಿ ಪಾಂಡೆ ಮಂಪರು ಪರೀಕ್ಷೆ
ಯಡಿಯೂರಪ್ಪ ಸುಳ್ಳಿನ ಸರದಾರ: ಉಗ್ರಪ್ಪ
ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ
ಮರೆತುಹೋದ ಸ್ಫೋಟ: ವಿಚಾರಣೆಗೆ ಬಿದರಿ ಸಾರಥ್ಯ!