ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮಾಲೆಗಾಂವ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಕೆ: ಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಲೆಗಾಂವ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಕೆ: ಪಾಂಡೆ
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿರುವ ಶಂಕಿತ ಆರೋಪಿಯಾಗಿರುವ ಸ್ವಾಮಿ ದಯಾನಂದ ಪಾಂಡೆಯನ್ನು ಶುಕ್ರವಾರ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಿದ್ದು, ಮಹತ್ವದ ಸುಳಿವು ಲಭಿಸಿರುವುದಾಗಿ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಬೆಳಿಗ್ಗೆ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ)ದ ಅಧಿಕಾರಿಗಳು ಸ್ವಾಮಿ ದಯಾನಂದ ಪಾಂಡೆಯನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಂಪರು ಪರೀಕ್ಷೆಗಾಗಿ ಕರೆ ತಂದಿದ್ದರು.

ಎನ್‌ಡಿ ಟಿವಿಯೊಂದಿಗೆ ಮಾತನಾಡಿದ ಎಟಿಎಸ್‌ನ ಹಿರಿಯ ಅಧಿಕಾರಿಯೊಬ್ಬರು, ಮಾಲೆಗಾಂವ್ ಸ್ಫೋಟದಲ್ಲಿ ಆರ್‌ಡಿಎಕ್ಸ್ ಅನ್ನು ಉಪಯೋಗಿಸಿರುವುದಾಗಿ ಪಾಂಡೆ ಮಂಪರು ಪರೀಕ್ಷೆ ವೇಳೆ ಬಹಿರಂಗಪಡಿಸಿರುವುದಾಗಿ ತಿಳಿಸಿರುವುದಾಗಿ ವರದಿ ಹೇಳಿದೆ.

ಪಾಂಡೆ ಮಂಪರು ಪರೀಕ್ಷೆ ವೇಳೆ ಬಾಯ್ಬಿಟ್ಟ ಅಂಶ:

ಮಾಲೆಗಾಂವ್ ಸ್ಫೋಟದಲ್ಲಿ ಆರ್‌ಡಿಎಕ್ಸ್ ಬಳಕೆ.

ಆರ್‌ಡಿಎಕ್ಸ್ ಸರಬರಾಜುದಾರ ಜಮ್ಮು-ಕಾಶ್ಮೀರದ ಮೊಹ್ಮದ್ ಗಿಲಾನಿ.

ಗಿಲಾನಿ ಆರ್‌ಡಿಎಕ್ಸ್ ಅನ್ನು ಪುಣೆಯಲ್ಲಿ ಸರಬರಾಜು ಮಾಡಿದ್ದಾನೆ.

ಮಾಲೆಗಾಂವ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಉಪಯೋಗಿಸಿರುವುದಾಗಿ ತಿಳಿಸಿರುವ ಪಾಂಡೆ, ಅದನ್ನು ಜಮ್ಮು-ಕಾಶ್ಮೀರದಿಂದ ಮೊಹಮ್ಮದ್ ಗಿಲಾನಿ ಎಂಬಾತ ಪುಣೆಗೆ ಸರಬರಾಜು ಮಾಡಿರುವುದಾಗಿ ಮಂಪರು ಪರೀಕ್ಷೆ ವೇಳೆ ಬಾಯ್ಬಿಟ್ಟಿದ್ದಾನೆ.

ಮಂಪರು ಪರೀಕ್ಷೆ ವೇಳೆ ಪಾಂಡೆ ಹಲವಾರು ಮಹತ್ವದ ಸುಳಿವನ್ನು ನೀಡಿರುವುದಾಗಿ ತಿಳಿಸಿರುವ ಎಟಿಎಸ್ ಅಧಿಕಾರಿಗಳು,ಇದು ಮುಂದಿನ ತನಿಖೆಗೆ ಸಹಾಯಕವಾಗಲಿದೆಯೇ ವಿನಃ, ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಬಳಸಲು ಕಾನೂನಿನಲ್ಲಿ ಸಮ್ಮತಿ ಇಲ್ಲ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ
ಚರ್ಚ್ ಸ್ಫೋಟ: 81 ಮಂದಿ ಆರೋಪ ಸಾಬೀತು
ಲೋಕಸಭೆ: ಜೆಡಿಎಸ್‌ನಿಂದ ಅನಂತಮೂರ್ತಿ ಸ್ಪರ್ಧೆ?
ಬೌರಿಂಗ್ ಆಸ್ಪತ್ರೆಯಲ್ಲಿ ಪಾಂಡೆ ಮಂಪರು ಪರೀಕ್ಷೆ
ಯಡಿಯೂರಪ್ಪ ಸುಳ್ಳಿನ ಸರದಾರ: ಉಗ್ರಪ್ಪ
ಚಲ್ಲಾ ಕೊಲೆ ಪ್ರಕರಣ: ಆರೋಪಿಗಳ ಬಂಧನ