ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಗೇನಕಲ್: ಜಂಟಿ ಸರ್ವೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್: ಜಂಟಿ ಸರ್ವೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಹೊಗೇನಕಲ್ ನೀರು ಯೋಜನೆ ಬಗ್ಗೆ ತಮಿಳುನಾಡು ಸರಕಾರ ಕೈಗೊಂಡಿರುವ ನಿಲುವನ್ನು ವಿರೋಧಿಸಿ ಬಿಜೆಪಿ ಮುಖಂಡ ಮಾಜಿ ಸಚಿವ ಎಂ.ಮಹದೇವು ನೇತೃತ್ವದಲ್ಲಿ 150ಕ್ಕೂ ಅಧಿಕ ಪ್ರತಿಭಟನಾಕಾರರು ಎರಡು ತಾಸುಗಳು ಪ್ರತಿಭಟನೆ ನಡೆಸಿದರು.

ಹೊಗೇನಕಲ್ ವಿವಾದಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆಗೆ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಇಲ್ಲಿನ ಮಹದೇಶ್ವರಬೆಟ್ಟದಿಂದ ಇಲ್ಲಿಗೆ ಸುಮಾರು 50ವಾಹನಗಳಲ್ಲಿ ಆಗಮಿಸಿದ ಪ್ರತಿಭಟನಾಕಾರರನ್ನು ನದಿ ಪಾತ್ರದ ಬಳಿಯಲ್ಲಿ ಪೊಲೀಸರು ತಡೆದರು. ಬಳಿಕ ಕಾವೇರಿ ಹೊಳೆ ದಂಡೆಗೆ ಹೋಗಲು ಅನುಮತಿ ನೀಡಿದಾಗ ಮಾಜಿ ಸಚಿವ ಮಹದೇವು, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಇತರರು ನೀರನ್ನು ಸ್ಪರ್ಶಿಸಿ ಜಯಘೋಷ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಎಂ.ಮಹದೇವು, ನಮ್ಮ ನೆಲ, ಜಲ, ಭಾಷೆ ರಕ್ಷಣೆ ನಮ್ಮ ಹೊಣೆ, ಈ ನಿಮಿತ್ತ ರಾಜ್ಯ ಸರಕಾರವನ್ನು ಜಾಗೃತಗೊಳಿಸಲು ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತರಲು ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆದರೆ ಇಲ್ಲಿ ನಮ್ಮ ಗಡಿಯೊಳಗೆ ಕನ್ನಡಿಗರು ಹೋಗದಂತೆ ನಮ್ಮ ಪೊಲೀಸರು ತಡೆಯುತ್ತಿರುವುದು ವಿಪರ್ಯಾಸ. ಅದೇ ನಮ್ಮ ಗಡಿಯಲ್ಲಿ ತಮಿಳುನಾಡು ಪೊಲೀಸರು ಪಹರೆ ಇದೆ ಎಂದು ಪೊಲೀಸರ ದ್ವಂದ್ವ ಖಂಡಿಸಿದರು.

ಕರ್ನಾಟಕದ ಭಾಗದಲ್ಲಿ ಎಎಸ್ಪಿ ನೇತೃತ್ವದಲ್ಲಿ 200ಪೊಲೀಸರು 3ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಒಂದು ಕೆಎಸ್‌ಆರ್‌ಪಿ ತುಕಡಿ ಇದ್ದರೆ, ತಮಿಳುನಾಡು ಭಾಗದ ಧರ್ಮಪುರಿ ಎಸ್ಪಿ ನಜಮಲ್ ಹೋಡಾ ನೇತೃತ್ವದಲ್ಲಿ 250ಕ್ಕೂ ಹೆಚ್ಚು ಪೊಲೀಸರ ಕಾವಲು ಹಾಕಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗಡಿ ಒತ್ತುವರಿ: ತನಿಖೆಗೆ ಕಾಂಗ್ರೆಸ್ ಆಗ್ರಹ
ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಏಕರೂಪ ವೇತನಕ್ಕೆ ಸಿಎಂ ಒಪ್ಪಿಗೆ
ಮಾಲೆಗಾಂವ್ ಸ್ಫೋಟಕ್ಕೆ ಆರ್‌ಡಿಎಕ್ಸ್ ಬಳಕೆ: ಪಾಂಡೆ
ವಿಧಾನಪರಿಷತ್ ಚುನಾವಣೆಗೆ ಅಧಿಸೂಚನೆ
ಚರ್ಚ್ ಸ್ಫೋಟ: 23 ಮಂದಿ ಆರೋಪ ಸಾಬೀತು