ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕ್ಯಾಟ್‌ವಾಕ್ ಮಾಡಿದ ಇನ್ಸ್‌ಪೆಕ್ಟರ್ ಅಮಾನತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಯಾಟ್‌ವಾಕ್ ಮಾಡಿದ ಇನ್ಸ್‌ಪೆಕ್ಟರ್ ಅಮಾನತು
ಫ್ಯಾಷನ್ ಶೋ ಆಕರ್ಷಣೆಗೊಳಗಾದ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಸರ್ಕಾರ ಒಂದು ಕೊಡುಗೆ ನೀಡಿದೆ. ಬೆಂಗಳೂರು ಮೂಲದ ದವನಮ್ ಜ್ಯುವೆಲ್ಲರ್ಸ್ ಬಳ್ಳಾರಿಯ ಹೋಟೆಲೊಂದರಲ್ಲಿ ತನ್ನ ಸಂಗ್ರಹವನ್ನು ಪ್ರದರ್ಶಿಸಲು ಮಾಡೆಲ್‌ಗಳನ್ನು ಬಳಸಿ ಫ್ಯಾಷನ್ ಶೋ ಮಾಡಿತು.

ಆದರೆ ಈ ಫ್ಯಾಷನ್ ಶೋಗೆ ಮರುಳಾದ ಕರ್ತವ್ಯದಲ್ಲಿದ್ದ ಕೌಲ್ ಬಜಾರ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ತಮ್ಮ ಪತ್ನಿ ಜೊತೆಯಲ್ಲಿ ಕ್ಯಾಟ್‌ವಾಕ್
ಹೆಜ್ಜೆ ಹಾಕಲಾರಂಭಿಸಿದರು. ಇದನ್ನು ಕಂಡ ಜನರಿಗೆ ಆಶ್ಚರ್ಯ. ತಮ್ಮ ಸಮವಸ್ತ್ರದ ಅಂಗಿ ಮರೆ ಮಾಡಲು ಮೇಲೊಂದು ಕಪ್ಪು ಜಾಕೆಟ್ ಧರಿಸಿದ್ದರು. ಸೊಂಟದ ಬೆಲ್ಟ್‌ಗೆ ಬಿಗಿದಿದ್ದ ರಿವಾಲ್ವರ್ ಕವಚ ಕೂಡಾ ಪ್ರೇಕ್ಷಕರಿಗೆ ಕಾಣುವಂತಿತ್ತು.

ಕರ್ತವ್ಯದಲ್ಲಿದ್ದಾಗ ಈ ರೀತಿಯ ಮನರಂಜನೆಯಲ್ಲಿ ಭಾಗವಹಿಸಿದ್ದರಿಂದ ಇವರನ್ನು ಕರ್ತವ್ಯದಿಂದ ವಜಾ ಮಾಡಲಾಗಿದೆ. ಈ ಬಗ್ಗೆ ಇನ್ಸ್‌ಪೆಕ್ಟರ್‌ನ ನ್ನು ಪ್ರಶ್ನಿಸಿದಾಗ, ಇದು ಇಷ್ಟೊಂದು ಗೊಂದಲಕ್ಕೆ ಕಾರಣಕ್ಕೆ ಕಾರಣವಾಗಬಹುದು ಎಂದು ನಾನು ಎಣಿಸಿಯೇ ಇರಲಿಲ್ಲ. ಸಣ್ಣದೊಂದು ಮನರಂಜನೆ ಬಿಟ್ಟರೆ ಯಾವ ಉದ್ದೇಶವೂ ಇರಲಿಲ್ಲ. ಈ ಸಮಾರಂಭ ನಡೆದ ಸ್ಥಳದ ಬಂದೋಬಸ್ತಿನ ಕರ್ತವ್ಯದಲ್ಲಿದ್ದೆ. ಸಂಘಟಕರು ಶೋನಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು ಎಂದು ಹೇಳಿದರು.

ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಅಮಾನತಿನಲ್ಲಿ ಇಡಲಾಗಿದೆ. ಅವರ ಬಗ್ಗೆ ಇಲಾಖಾ ತನಿಖೆಗೆ ಆದೇಶೀಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆ: ಶೀಘ್ರವೇ ಅಭ್ಯರ್ಥಿಗಳ ಪಟ್ಟಿ - ಡಿ.ವಿ.
ಉಪಚುನಾವಣೆ ಮುಂದೂಡಿಕೆಗೆ ಕೇಂದ್ರದ ಹುನ್ನಾರ: ನಾಯಕ್
ಚರ್ಚ್ ಸ್ಫೋಟ: ನ.28ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ
ತೊಂಬಟ್ಟು: ಮೃತ ನಕ್ಸಲರಿಗೆ ಶ್ರದ್ಧಾಂಜಲಿ
ಬಿಐಎಎಲ್ ಕಳಪೆ ಗುಣಮಟ್ಟ: ಡಿಕೆಶಿ
ಬಿಐಎಎಲ್ ಸಿಇಒ ಬ್ರೂನರ್ ರಾಜೀನಾಮೆ