ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಕ್ಸಲರಿಂದ ಪೊಲೀಸರಿಗೆ ಬಹಿರಂಗ ಪತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕ್ಸಲರಿಂದ ಪೊಲೀಸರಿಗೆ ಬಹಿರಂಗ ಪತ್ರ
ಸದಾ ಪೊಲೀಸರನ್ನು ದೂಷಿಸುತ್ತಿದ್ದ ನಕ್ಸಲರು ಇದೇ ಮೊದಲ ಬಾರಿಗೆ ಪೊಲೀಸರಿಗೆ ಶಾಂತವಾಗಿ ಹಾಗೂ ಅಷ್ಟೇ ವಿನಂತಿಯಿಂದ ಪ್ರಕಟಿತ ಬರಹದ ಮೂಲಕ ಕೆಲವು ಅಂಶಗಳನ್ನು ಮನವಿ ಮಾಡಿಕೊಂಡಿದ್ದಾರೆ.ಇತ್ತೀಚೆಗೆ ಗುಂಡಿನ ಚಕಮಕಿಯಲ್ಲಿ ಸಾವೀಗೀಡಾದ ನಕ್ಸಲರಿಂದ ಪತ್ರವನ್ನು ವಶಪಡಿಸಿಕೊಳ್ಳಲಾಗಿದೆ.

ಪತ್ರದ ಸಾರಾಂಶ ಇಂತಿದೆ:

ಆತ್ಮೀಯ ಸಾಮಾನ್ಯ ಪೊಲೀಸರೇ, ನೀವೆಲ್ಲರೂ ರೈತ, ಕಾರ್ಮಿಕ ವರ್ಗ ಹಾಗೂ ಮಧ್ಯಮ ವರ್ಗದ ಮಕ್ಕಳಾಗಿದ್ದು, ಸಮಾಜದ ಕೆಳಸ್ತರದಿಂದ ಬಂದವರಾಗಿದ್ದೀರಿ. ಶೋಷತ ಸಾಮಾಜಿಕ ವ್ಯವಸ್ಥೆ ನಿಮ್ಮನ್ನು ಈ ಉದ್ಯೋಗಕ್ಕೆ ಬರುವಂತೆ ಮಾಡಿದೆ. ನಿಮ್ಮ ಆತ್ಮಗೌರವವನ್ನು ಮರೆತು ನೀವು ಮೇಲಾಧಿಕಾರಿಗಳಿಂದ ಶೋಷಣೆಗೊಳಗಾಗಿ ದುಡಿಯುತ್ತಿದ್ದೀರಿ. ನೀವು ಈ ವ್ಯವಸ್ಥೆಯಿಂದ ಬೇಸತ್ತಿದ್ದೀರಿ. ಕೆಲವರು ಆತ್ಮಹತ್ಯೆಯಂತಹ ಕೃತ್ಯಕ್ಕೂ ಮುಂದಾಗುತ್ತಿದ್ದಾರೆ. ನಿಮ್ಮ ಕೆಲಸದ ನೆಪದಲ್ಲಿ ಜನರ ವಿರುದ್ಧ ಕೆಲಸ ಮಾಡುವಂತೆ ಆಡಳಿತವರ್ಗ ಒತ್ತಡ ಹೇರುತ್ತದಲ್ಲದೇ, ಮುಗ್ದರನ್ನು ಕೊಲ್ಲುವಂತೆ ಹೇಳುತ್ತದೆ. ಸಾಮಾನ್ಯ ಜನರನ್ನು ಬೆದರಿಸಲು ನಿಮ್ಮನ್ನು ಬಳಸುತ್ತದೆ. ನಿಮ್ಮ ಸಮಸ್ಯೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ನಿಮ್ಮ ಜನರಿಗೆ ನೀವು ಲಾಠಿ ಹಾಗೂ ಬಂದೂಕು ಎತ್ತಬೇಡಿ ಎಂದು ಬರೆದಿದ್ದಾರೆ.

ಇಂತಹ ವ್ಯವಸ್ಥೆ ಹಾಗೂ ಅದರ ರಕ್ಷಕರ ವಿರುದ್ಧ ಪ್ರತಿಭಟಿಸುವಂತೆ ನಕ್ಸಲರು ಪೊಲೀಸರಿಗೆ ಕರೆ ನೀಡಿದ್ದಾರೆ. ಪತ್ರದ ಕೊನೆಯಲ್ಲಿ ಸಿಪಿಐ (ಮಾವೋ) ಎಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕ್ಯಾಟ್‌ವಾಕ್ ಮಾಡಿದ ಇನ್ಸ್‌ಪೆಕ್ಟರ್ ಅಮಾನತು
ಚುನಾವಣೆ: ಶೀಘ್ರವೇ ಅಭ್ಯರ್ಥಿಗಳ ಪಟ್ಟಿ - ಡಿ.ವಿ.
ಉಪಚುನಾವಣೆ ಮುಂದೂಡಿಕೆಗೆ ಕೇಂದ್ರದ ಹುನ್ನಾರ: ನಾಯಕ್
ಚರ್ಚ್ ಸ್ಫೋಟ: ನ.28ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ
ತೊಂಬಟ್ಟು: ಮೃತ ನಕ್ಸಲರಿಗೆ ಶ್ರದ್ಧಾಂಜಲಿ
ಬಿಐಎಎಲ್ ಕಳಪೆ ಗುಣಮಟ್ಟ: ಡಿಕೆಶಿ