ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'
ವಿಧಾನಪರಿಷತ್‌ನ ಎರಡು ಸ್ಥಾನಗಳಿಗೆ ಡಿಸೆಂಬರ್ 9ರಂದು ನಡೆಯಲಿರುವ ಚುನಾವಣೆಗೆ ಹೊರಡಿಸಿರುವ ಪ್ರತ್ಯೇಕ ಅಧಿಸೂಚನೆ ಹಿಂತೆಗೆದುಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಂದ್ರ ಸರ್ಕಾರ ಒತ್ತಡ ಹೇರುವ ಸಾಧ್ಯತೆಗಳಿವೆ.

ವಿಧಾನಸಭಾ ಸದಸ್ಯರು ಮತದಾರರಾಗಿರುವ ಈ ಚುನಾವಣೆಗೆ ಆಯೋಗ ಪ್ರಕಟಿಸಿರುವಂತೆಯೇ ಚುನಾವಣೆ ನಡೆದರೆ ಹೆಚ್ಚಿನ ಸ್ಥಾನ ಬಲ ಹೊಂದಿರುವ ಬಿಜೆಪಿಗೆ ಎರಡೂ ಸ್ಥಾನಗಳು ದೊರೆಯಲಿವೆ. ಏಕೆಂದರೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವುದರಿಂದ ಎರಡು ಸ್ಥಾನಗಳಿಗೂ ಪ್ರತ್ಯೇಕವಾಗಿ ಮತದಾನ ನಡೆಯಲಿದ್ದು, ಪ್ರಾಶಸ್ತದ ಮತ ಹಾಕುವ ಪದ್ಧತಿಗೆ ಅವಕಾಶವೇ ಇರುವುದಿಲ್ಲ.

ಈ ಚುನಾವಣೆಯಲ್ಲಿ ಗೆಲ್ಲಲು 109 ಮತಗಳ ಅಗತ್ಯವಿದ್ದು, ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ 110 ಇದೆ. ಹೀಗಾಗಿ ಈ ಚುನಾವಣೆಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವ ಆಯೋಗದ ನೀತಿ ಪರೋಕ್ಷವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆ.

ಶೋಭಾ ಕರಂದ್ಲಾಜೆ ಹಾಗೂ ಅರವಿಂದ ಲಿಂಬಾವಳಿ ರಾಜೀನಾಮೆಯಿಂದ ತೆರವಾಗಿರುವ ಈ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವರ್ತೂರು ಪ್ರಕಾಶ್ ಬಿಜೆಪಿಗೆ ಗುಡ್‌ಬೈ?
ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ
ಡಿ. 27ರಂದು ವಿಧಾನಸಭಾ ಉಪಚುನಾವಣೆ
ನಕ್ಸಲರಿಂದ ಪೊಲೀಸರಿಗೆ ಬಹಿರಂಗ ಪತ್ರ
ಕ್ಯಾಟ್‌ವಾಕ್ ಮಾಡಿದ ಇನ್ಸ್‌ಪೆಕ್ಟರ್ ಅಮಾನತು
ಚುನಾವಣೆ: ಶೀಘ್ರವೇ ಅಭ್ಯರ್ಥಿಗಳ ಪಟ್ಟಿ - ಡಿ.ವಿ.