ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಗ್ರರಿಗೆ ಹಿಂದೂ-ಮುಸ್ಲಿಂ ಲೇಬಲ್ ಬೇಡ: ಅನಂತಮೂರ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರಿಗೆ ಹಿಂದೂ-ಮುಸ್ಲಿಂ ಲೇಬಲ್ ಬೇಡ: ಅನಂತಮೂರ್ತಿ
ಭಯೋತ್ಪಾದಕರಿಗೆ ಹಿಂದೂ ಅಥವಾ ಮುಸ್ಲಿಂ ಎಂಬ ಹಣೆಪಟ್ಟಿ ಕಟ್ಟುವುದನ್ನು ಬಿಡಬೇಕು ಎಂದು ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಆಯೋಜಿಸಿದ್ದ ಶಾಂತಿ ಮತ್ತು ನ್ಯಾಯಕ್ಕಾಗಿ ರಾಷ್ಟ್ರಮಟ್ಟದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಯೋತ್ಪಾದನೆ ಎನ್ನುವುದು ಜಾಗತಿಕವಾಗಿ ಹಬ್ಬಿದೆ. ಒಬ್ಬ ವ್ಯಕ್ತಿಗೆ ಆತನ ಧರ್ಮದ ಹೆಸರಿನಿಂದ ಭಯೋತ್ಪಾದಕನ ಪಟ್ಟ ಕಟ್ಟುವುದು ಸರಿಯಲ್ಲ ಎಂದರು.

ಯಾವುದೇ ಒಬ್ಬ ವ್ಯಕ್ತಿ ಬಾಂಬ್ ಹಾಕಿದರೆ ಅಥವಾ ಕೊಲೆ ಮಾಡಿದರೆ ಮುಸ್ಲಿಂ ಸಮುದಾಯ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿದೆ. ಆದರೆ, ವಿಚಾರಣೆ ಮಾಡಿದಾಗ ತಪ್ಪಿತಸ್ಥರಲ್ಲ ಎಂದು ತಿಳಿದು ಬರುತ್ತದೆ. ಈ ರೀತಿ ಮಾಡುವುದು ತಪ್ಪು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಭಾರತ ಒಂದು ಫ್ಯಾಸಿಸ್ಟ್ ರಾಷ್ಟ್ರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕನ್ನಡ ಸಿನಿಮಾಗಳ ಬಗ್ಗೆ ಕಾಳಜಿ ಇಲ್ಲ: ಕಾಸರವಳ್ಳಿ
ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'
ವರ್ತೂರು ಪ್ರಕಾಶ್ ಬಿಜೆಪಿಗೆ ಗುಡ್‌ಬೈ?
ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ
ಡಿ. 27ರಂದು ವಿಧಾನಸಭಾ ಉಪಚುನಾವಣೆ
ನಕ್ಸಲರಿಂದ ಪೊಲೀಸರಿಗೆ ಬಹಿರಂಗ ಪತ್ರ