ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಧರ್ಮದ ಹೆಸರಲ್ಲಿ ರಾಜಕಾರಣ ಬೇಡ: ಸದಾನಂದಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧರ್ಮದ ಹೆಸರಲ್ಲಿ ರಾಜಕಾರಣ ಬೇಡ: ಸದಾನಂದಗೌಡ
ದೇಶ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದರು.

ತಾಲೂಕಿನ ಹನಕೆರೆ ಗ್ರಾಮದ ರೈತ ಶಿಕ್ಷಣ ಸಂಸ್ಥೆಯಲ್ಲಿ ಬಿಜೆಪಿ ರಾಜ್ಯ ಯುವ ಮೋರ್ಚಾ ವಿಕಾಸ ಶಿಬಿರ ಉದ್ಘಾಟಿಸಿ ಮಾತನಾಡಿ, ಈಗ ಸಾಮಾಜಿಕ ಪಿಡುಗಾಗಿರುವ ಭಯೋತ್ಪಾದನೆ, ಭ್ರಷ್ಟಾಚಾರ ಹಾಗೂ ಮತಾಂತರದ ವಿರುದ್ಧ ಸಮರ ಸಾರಲು ಯುವ ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.

ಈಗಿನ ರಾಜಕಾರಣ ಕಲುಷಿತಗೊಂಡಿದೆ. ಪಕ್ಷದ ಕಾರ್ಯಕರ್ತರು ಕೆಸರಿನಲ್ಲಿ ಅರಳಿದ ಕಮದಂತೆ ರಾಜಕಾರಣಣವನ್ನು ಶುದ್ದೀಕರಿಸಬೇಕಿದೆ. ರಾಜ್ಯದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ರಾಜಕೀಯ ಪಕ್ಷಗಳ ಸ್ವಜನ ಪಕ್ಷಪಾತ ಹಾಗೂ ಅನೀತಿಯ ಧೋರಣೆಯಿಂದಾಗಿ ರಾಜಕಾರಣ ಕಲುಷಿತಗೊಂಡಿದೆ. ಇದನ್ನು ಶುದ್ದೀಕರಿಸಿ ಮೌಲ್ಯಾಧಾರಿತ ರಾಜಕಾರಣ ಮಾಡುವ ಕೆಲಸ ಬಿಜೆಪಿಯಿಂದ ಆಗಬೇಕಿದೆ ಎಂದರು.

ಕಾಂಗ್ರೆಸ್ ತನ್ನ ಸ್ವಜನ ಪಕ್ಷಪಾತತನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು. ಜನತಾ ಪರಿವಾರವೂ ಇದೇ ಹಾದಿಯಲ್ಲಿ ಸಾಗಿತು. ಆದರೆ, ವಾಜಪೇಯಿ ಪ್ರಧಾನಿಯಾಗಿ ಬದಲಾವಣೆ ತಂದರು ಎಂದು ಹೇಳಿದರು.

ಅಭಿವೃದ್ಧಿಗೆ ಪೂರಕವಾಗಿ ಬಿಜೆಪಿ ಆಡಳಿತ ನೀಡುತ್ತಿದೆ. ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ಕೇವಲ ಘೋಷಣೆ ಮತ್ತು ಭಾಷಣಕ್ಕೆ ಸೀಮಿತವಾಗಿದೆ ಎಂದು ದೂರಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರಿಗೆ ಹಿಂದೂ-ಮುಸ್ಲಿಂ ಲೇಬಲ್ ಬೇಡ: ಅನಂತಮೂರ್ತಿ
ಕನ್ನಡ ಸಿನಿಮಾಗಳ ಬಗ್ಗೆ ಕಾಳಜಿ ಇಲ್ಲ: ಕಾಸರವಳ್ಳಿ
ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'
ವರ್ತೂರು ಪ್ರಕಾಶ್ ಬಿಜೆಪಿಗೆ ಗುಡ್‌ಬೈ?
ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ
ಡಿ. 27ರಂದು ವಿಧಾನಸಭಾ ಉಪಚುನಾವಣೆ