ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಭಿವೃದ್ಧಿ: ಶಾಸಕ-ಸಂಸದರೊಂದಿಗೆ ಸಿಎಂ ಚರ್ಚೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ: ಶಾಸಕ-ಸಂಸದರೊಂದಿಗೆ ಸಿಎಂ ಚರ್ಚೆ
ರಾಜ್ಯದಲ್ಲಿ ಬಜೆಟ್ ಕಾರ್ಯಕ್ರಮಗಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ಶಾಸಕರು, ಸಚಿವರು, ಸಂಸದರೊಂದಿಗೆ ಸೋಮವಾರ ಸಮಾಲೋಚನೆ ನಡೆಸಿದರು.

ಇತ್ತೀಚೆಗಷ್ಟೇ ಬಜೆಟ್ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಕಾರ್ಯದರ್ಶಿ ಮಟ್ಟದ ಸಭೆಯಲ್ಲಿ ಪರಾಮರ್ಶೆ ನಡೆಸಿದ ಮುಖ್ಯಮಂತ್ರಿಗಳು ಪ್ರಗತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯಕ್ರಮಗಳ ಜಾರಿಯನ್ನು ಇನ್ನಷ್ಟು ಚುರುಕುಗೊಳಿಸುವ ಉದ್ದೇಶದಿಂದ ಮೊದಲ ಹಂತದ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಬಜೆಟ್ ಯೋಜನೆಗಳ ಯಾವ ರೀತಿ ಜಾರಿಯಾಗುತ್ತಿವೆ. ಪ್ರಗತಿ ಕುಂಠಿತವಾಗಿರುವುದಕ್ಕೆ ಕಾರಣ ಮುಂತಾದ ಅಂಶಗಳ ಕುರಿತು ನೇರವಾಗಿ ಮುಖ್ಯಮಂತ್ರಿಗಳು ಆಯಾ ಕ್ಷೇತ್ರದ ಶಾಸಕರೊಂದಿಗೆ ಚರ್ಚಿಸಿದರು.

ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಕಾಲ ಕಾಲಕ್ಕೆ ತಮ್ಮ ಉಸ್ತುವಾರಿ ಜಿಲ್ಲೆಗಳಿಗೆ ತೆರಳಿ ಪ್ರಗತಿಯ ಪರಿಶೀಲನೆ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಧರ್ಮದ ಹೆಸರಲ್ಲಿ ರಾಜಕಾರಣ ಬೇಡ: ಸದಾನಂದಗೌಡ
ಉಗ್ರರಿಗೆ ಹಿಂದೂ-ಮುಸ್ಲಿಂ ಲೇಬಲ್ ಬೇಡ: ಅನಂತಮೂರ್ತಿ
ಕನ್ನಡ ಸಿನಿಮಾಗಳ ಬಗ್ಗೆ ಕಾಳಜಿ ಇಲ್ಲ: ಕಾಸರವಳ್ಳಿ
ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'
ವರ್ತೂರು ಪ್ರಕಾಶ್ ಸರಕಾರಕ್ಕೆ ಗುಡ್‌ಬೈ?
ಶ್ರೀರಾಮುಲು ಸಿಎಂ ಆಗುವುದು ಖಚಿತ: ರೆಡ್ಡಿ