ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಉಪಚುನಾವಣೆ: ಬಿಜೆಪಿಗೆ 'ಅಗ್ನಿ ಪರೀಕ್ಷೆ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಚುನಾವಣೆ: ಬಿಜೆಪಿಗೆ 'ಅಗ್ನಿ ಪರೀಕ್ಷೆ'
ರಾಜ್ಯರಾಜಕಾರಣದಲ್ಲಿ 224ಸದಸ್ಯ ಬಲ ಹೊಂದಿರುವ ವಿಧಾನಸಭೆಯಲ್ಲಿ ಅಲ್ಪ ಬಹುಮತದೊಂದಿಗೆ(110)ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ, ಆರು ಮಂದಿ ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ ದಿನದೂಡುತ್ತಿರುವ ಸರಕಾರ ಇದೀಗ ಡಿ.27ರಂದು ನಡೆಯುವ ಉಪಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುವ ಹವಣಿಕೆಯಲ್ಲಿದೆ.

ಸ್ಪೀಕರ್ ಸೇರಿದಂತೆ ಭಾರತೀಯ ಜನತಾಪಕ್ಷ 110 ಸದಸ್ಯ ಬಲವನ್ನು ಹೊಂದಿದ್ದು, ಉಪಚುನಾವಣೆಯಲ್ಲಿನ ಅವಕಾಶ ಸದುಪಯೋಗಪಡಿಸಿಕೊಂಡು ಏಳು ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಹುಮತ ಪಡೆಯುವ ನಿರೀಕ್ಷೆ ಬಿಜೆಪಿಯದ್ದು.

ಮಧುಗಿರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ಬಾಕಿ ಇರುವುದರಿಂದ ಆ ಕ್ಷೇತ್ರದ ಚುನಾವಣೆ ಪ್ರಕಟಿಸಿಲ್ಲ. ಉಳಿದಂತೆ ಏಳು ಕ್ಷೇತ್ರವಾದ ಬೆಳಗಾವಿ ಜಿಲ್ಲೆಯ ಅರಭಾವಿ, ಹುಕ್ಕೇರಿ, ತುಮಕೂರು ಜಿಲ್ಲೆಯ ತುರುವೇಕೆರೆ, ಮಂಡ್ಯ ಜಿಲ್ಲೆಯ ಮದ್ದೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡ ಬಳ್ಳಾಪುರ, ರಾಯಚೂರು ಜಿಲ್ಲೆಯ ದೇವದುರ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 27ರಂದು ಚುನಾವಣೆ ಘೋಷಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಬಲವರ್ಧನೆಗಾಗಿ 'ಆಪರೇಶನ್ ಕಮಲ'ದ ಹೆಸರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಿರೋಧಪಕ್ಷವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡ ಪರಿಣಾಮ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳಿಗೆ ಚುನಾವಣೆ ನಡೆಯುವಂತಾಗಿದೆ.

ಚುನಾವಣೆಗೆ ಅಖಾಡ ಸಜ್ಜುಗೊಳ್ಳುವಂತಿರುವಂತೆಯೇ, ರಾಜ್ಯ ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು,ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಕೇವಲ ಎರಡು ದಿನಗಳಲ್ಲೇ ಏಳು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸುವುದಾಗಿ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಏತನ್ಮಧ್ಯೆ ಉಪಚುನಾವಣೆ ಆಡಳಿತರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಜಿದ್ದಾಜಿದ್ದಿನ ಹೋರಾಟಕ್ಕೆ ಅಣಿಯಾಗತೊಡಗಿವೆ.

ಬಿಜೆಪಿಗೆ ಏಳು ಸ್ಥಾನಗಳನ್ನು ಜಯಿಸುವ ಮೂಲಕ ಬಹುಮತದೊಂದಿಗೆ ಭದ್ರವಾಗಿ ತಳವೂರಬಹುದು ಎಂಬ ಲೆಕ್ಕಚಾರದಲ್ಲಿದೆ. ಕಾಂಗ್ರೆಸ್-ಜೆಡಿಎಸ್ ಪ್ರತಿತಂತ್ರ ಹೆಣೆಯುವ ಮೂಲಕ ಬಿಜೆಪಿ ಜಯದ ಓಟಕ್ಕೆ ತಡೆಯೊಡ್ಡುವ ಕಾರ್ಯದಲ್ಲಿ ಮಗ್ನವಾಗುವ ಮೂಲಕ ಈ ಚುನಾವಣೆ ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನೀತಿ ಸಂಹಿತೆ' ಉಲ್ಲಂಘಿಸಿದರೆ ಹುಶಾರ್: ವಿದ್ಯಾಶಂಕರ್
ಅಭಿವೃದ್ಧಿ: ಶಾಸಕ-ಸಂಸದರೊಂದಿಗೆ ಸಿಎಂ ಚರ್ಚೆ
ಧರ್ಮದ ಹೆಸರಲ್ಲಿ ರಾಜಕಾರಣ ಬೇಡ: ಸದಾನಂದಗೌಡ
ಉಗ್ರರಿಗೆ ಹಿಂದೂ-ಮುಸ್ಲಿಂ ಲೇಬಲ್ ಬೇಡ: ಅನಂತಮೂರ್ತಿ
ಕನ್ನಡ ಸಿನಿಮಾಗಳ ಬಗ್ಗೆ ಕಾಳಜಿ ಇಲ್ಲ: ಕಾಸರವಳ್ಳಿ
ವಿಧಾನಪರಿಷತ್ ಚುನಾವಣೆ: ಕೇಂದ್ರದಿಂದ 'ಕಸರತ್ತು'