ಪಶ್ಚಿಮಘಟ್ಟ ಪ್ರದೇಶದಲ್ಲಿ ಸಶಸ್ತ್ರ ಹೋರಾಟ ನಡೆಸುತ್ತಿರುವ ನಕ್ಸಲೀಯರ ಜೊತೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಸೋಮವಾರ ಸ್ಪಷ್ಟವಾಗಿ ತಿಳಿಸಿದ್ದಾರೆ.
ನಕ್ಸಲರು ಶಸ್ತ್ರಗಳನ್ನು ತ್ಯಜಿಸಿದರೇ ಮಾತ್ರವೇ ಸರಕಾರ ಮಾತುಕತೆ ನಡೆಸಬಹುದು ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಸಂಪದ್ಭರಿತವಾಗಿದೆ. ಅಭಿವೃದ್ದಿ ಹಾಗೂ ಸುಶಿಕ್ಷಿತರು ಹೆಚ್ಚಾಗಿದ್ದಾರೆ. ಈ ಜಿಲ್ಲೆಗಳ ಬೆಳವಣಿಗೆಯನ್ನು ಸಹಿಸದವರು ನಕ್ಸಲಿರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಮಾಹಿತಿ ತಮ್ಮ ಬಳಿ ಇದೆ ಎಂದರು.
ಏತನ್ಮಧ್ಯೆ ಸಮಾಜವಾದಿ ಮಹಿಳಾ ಘಟಕದ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ಅವರು, ನಕ್ಸಲರಿಗೆ ಹಿಂದಿನಿಂದ ಗುಂಡೇಟು ಹೊಡೆಯಲಾಗಿದೆ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಆಚಾರ್ಯ, ಅವರನ್ನೇ ವಿಚಾರಣೆಗೆ ಒಳಪಡಿಸಿದರೆ ಹೆಚ್ಚಿನ ಮಾಹಿತಿ ದೊರಕಬಹುದು ಎಂದರು. |