ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಕುತೂಹಲ ಹುಟ್ಟಿಸಿದ ಗೌಡರ ಖಾಕಿ ಕವರ್ ಪೂಜೆ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುತೂಹಲ ಹುಟ್ಟಿಸಿದ ಗೌಡರ ಖಾಕಿ ಕವರ್ ಪೂಜೆ!
ದೇವರ ಸನ್ನಿಧಿಯಲ್ಲಿ 'ನೋ ಪಾಲಿಟಿಕ್ಸ್ ಪ್ಲೀಸ್'
ಹೋಮ ಹವನಗಳನ್ನು ಮಾಡಿಸುವಲ್ಲಿ ಇತರರಿಗಿಂತ ಒಂದು ಹೆಜ್ಜೆ ಮುಂದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬಾರಿ ಹೊಸ ರೀತಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಎಲ್ಲರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಸೋಮವಾರ ದೇವೇಗೌಡರು ಅವರು ಹುಟ್ಟೂರಾದ ಹೊಳೆನರಸೀಪುರ ತಾಲೂಕು ಹರದನಹಳ್ಳಿಯ ಈಶ್ವರ ದೇಗುಲಕ್ಕೆ ಏಕಾಂಗಿಯಾಗಿ ಬಂದು ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಜೊತೆ ತಂದಿದ್ದ ಖಾಕಿ ಕವರ್‌‌ ಒಂದಕ್ಕೂ ಪೂಜೆ ಸಲ್ಲಿಸುವ ಮೂಲಕ ಮಾಧ್ಯಮಗಳ ಹಾಗೂ ಗ್ರಾಮಸ್ಥರ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಲು ಬಂದಾಗ, ಇಂದು ಕೊನೆಯ ಕಾರ್ತೀಕ ಸೋಮವಾರ. ನನ್ನ ಮನೆ ದೇವರು ಈಶ್ವರ. ಪೂಜೆ ಸಲ್ಲಿಸಲು ಬಂದಿದ್ದೇನೆ. ಅಷ್ಟೇ ದೇವರ ಸನ್ನಿಧಿಯಲ್ಲಿ ನೋ ಪಾಲಿಟಿಕ್ಸ್ ಪ್ಲೀಸ್ ಎಂದು ಹೇಳಿ ದೇವೇಗೌಡರು ಕಾರು ಹತ್ತಿ ಬೆಂಗಳೂರಿನತ್ತ ಹೊರಟೇ ಬಿಟ್ಟರು.

ಸಾಮಾನ್ಯವಾಗಿ ಗೌಡರು ಬಂದರೆ ಅಲ್ಲಿನ ಗ್ರಾಮಸ್ಥರಿಗೆ ಕಾಸು ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಿದ್ದರು. ಆದರೆ ಈ ಬಾರಿ ಯಾರಿಗೂ ಏನು ಕೊಡದೇ ನಗುತ್ತಾ ಟಾಟಾ ಹೇಳಿ ಕಾರು ಹತ್ತಿದರು. ಆದರೆ ಪೂಜೆ ವೇಳೆ ಅಲ್ಲೇ ಇದ್ದ ಆರ್ಚಕರ 10 ವರ್ಷದ ಮಗನನ್ನು ಕರೆದು ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಆತನಿಗೆ ದುಡ್ಡು ಕೊಟ್ಟರು. ಒಂದು ಮೂಲದ ಪ್ರಕಾರ, ಪಕ್ಷದ ಅಭ್ಯರ್ಥಿಗಳಿಗೆ ನೀಡುವ ಬಿ ಫಾರಂ ಕವರ್‌‌ನಲ್ಲಿತ್ತು ಎನ್ನಲಾಗಿದೆ. ಒಟ್ಟಾರೆ ಈಗ ಗ್ರಾಮದಲ್ಲಿ ಗೌಡರು ತಂದ ಖಾಕಿ ಕವರ್‌ನದ್ದೇ ಚರ್ಚೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪಚುನಾವಣೆ: ಪಕ್ಷೇತರರ ಮೇಲೆ ತೂಗುಕತ್ತಿ
ನಕ್ಸಲರೊಂದಿಗೆ ಮಾತುಕತೆ ಇಲ್ಲ: ಆಚಾರ್ಯ
'ಕೈ' ಜತೆ ಮೈತ್ರಿಗೆ ಜೆಡಿಎಸ್ ನಕಾರ
ವರ್ತೂರು ಬೆಂಬಲ ವಾಪಸ್ ಪಡೆಯಲಿ: ಡಿವಿ ತಿರುಗೇಟು
ಉಪಚುನಾವಣೆ: ಬಿಜೆಪಿಗೆ 'ಅಗ್ನಿ ಪರೀಕ್ಷೆ'
'ನೀತಿ ಸಂಹಿತೆ' ಉಲ್ಲಂಘಿಸಿದರೆ ಹುಶಾರ್: ವಿದ್ಯಾಶಂಕರ್