ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಡಿ.ವಿ. ತಿರುಗೇಟಿಗೆ ತೆಪ್ಪಗಾದ ವರ್ತೂರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿ.ವಿ. ತಿರುಗೇಟಿಗೆ ತೆಪ್ಪಗಾದ ವರ್ತೂರು
ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ಬಗ್ಗೆ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ನೀಡಿದ ತಿರುಗೇಟಿಗೆ ವರ್ತೂರು ತೆಪ್ಪಗಾಗುವ ಮೂಲಕ ಈಗ ತಮ್ಮ ರಾಗ ಬದಲಿಸಿದ್ದಾರೆ. ಈಗವರು ಬಿಜೆಪಿ ಸರಕಾರಕ್ಕೆ ನೀಡಿರುವ ಬೆಂಬಲ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕೆಲ ದಿನಗಳಿಂದ ಮನಬಂದಂತೆ ಹೇಳಿಕೆ ನೀಡುತ್ತಿದ್ದ ವರ್ತೂರಿಗೆ ಸೋಮವಾರ ಸದಾನಂದ ಗೌಡ ಖಾರವಾಗಿ ಪ್ರತಿಕ್ರೆಯ ನೀಡಿದ್ದರು. ಇದರಿಂದ ತಮ್ಮ ಇದ್ದ ಸ್ಥಾನವೂ ಕಳೆದು ಹೋಗುವ ಬಯದಲ್ಲಿ ತಾವು ಬಿಜೆಪಿ ಸರಕಾರಕ್ಕೆ ಬೆಂಬಲ ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ತಮಗೆ ಯಡಿಯೂರಪ್ಪ ನಾಯಕತ್ವದಲ್ಲಿ ಪೂರ್ಣ ವಿಶ್ವಾಸವಿದ್ದು, ಜನಾದೇಶಕ್ಕೆ ಅನುಗುಣವಾಗಿ ಬಿಜೆಪಿ ಸರಕಾರಕ್ಕೆ ಬೆಂಬಲ ಮುಂದುವರಿಸುವೆ. ಯಡಿಯೂರಪ್ಪ ನೇತೃತ್ವದ ಸರಕಾರ ಯಾವುದೇ ಅಡ್ಡಿ, ಆತಂಕಗಳಿಲ್ಲದೇ 5 ವರ್ಷ ಜನಪರ ಆಡಳಿತ ನೀಡಲಿದೆ.
ಪಕ್ಷೇತರ ಶಾಸಕರು ಹಾಗೂ ಸರಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಪಚುನಾವಣೆಯಲ್ಲಿ ಬಿಜೆಪಿ 7 ಸ್ಥಾನ ಗೆದ್ದರೂ ಪಕ್ಷೇತರರು ಬೆಂಬಲ ಮುಂದುವರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಪಕ್ಷೇತರರನ್ನು ಕೈ ಬಿಡುವುದಿಲ್ಲ: ಉಪಚುನಾವಣೆಯಲ್ಲಿ ಏನೇ ಫಲಿತಾಂಶ ಬಂದರೂ ಪಕ್ಷೇತರರನ್ನು ಕೈ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕುತೂಹಲ ಹುಟ್ಟಿಸಿದ ಗೌಡರ ಖಾಕಿ ಕವರ್ ಪೂಜೆ!
ಉಪಚುನಾವಣೆ: ಪಕ್ಷೇತರರ ಮೇಲೆ ತೂಗುಕತ್ತಿ
ನಕ್ಸಲರೊಂದಿಗೆ ಮಾತುಕತೆ ಇಲ್ಲ: ಆಚಾರ್ಯ
'ಕೈ' ಜತೆ ಮೈತ್ರಿಗೆ ಜೆಡಿಎಸ್ ನಕಾರ
ವರ್ತೂರು ಬೆಂಬಲ ವಾಪಸ್ ಪಡೆಯಲಿ: ಡಿವಿ ತಿರುಗೇಟು
ಉಪಚುನಾವಣೆ: ಬಿಜೆಪಿಗೆ 'ಅಗ್ನಿ ಪರೀಕ್ಷೆ'