ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮೈತ್ರಿ ಹೈಕಮಾಂಡ್‌ಗೆ ಬಿಟ್ಟ ವಿಚಾರ: ದೇಶಪಾಂಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೈತ್ರಿ ಹೈಕಮಾಂಡ್‌ಗೆ ಬಿಟ್ಟ ವಿಚಾರ: ದೇಶಪಾಂಡೆ
ವಿಧಾನಸಭಾ ಏಳು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಂದೆ ಯಾವುದೇ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾವನೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸ್ಪಷ್ಟಪಡಿಸಿದ್ದಾರೆ.

ಎಡಪಕ್ಷಗಳಿಂದಾಗಲಿ ಅಥವಾ ಬೇರೆ ಪಕ್ಷಗಳಿಂದಾಗಲಿ ಮೈತ್ರಿ ಕುರಿತು ಪ್ರಸ್ತಾವನೆ ಬಂದಲ್ಲಿ ಆ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಚುನಾವಣೆ ನಡೆಯಲಿರುವ ಎಲ್ಲ ಏಳು ಸ್ಥಾನಗಳಿಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಕ್ಷೇತ್ರಗಳಿಂದ ತಲಾ 3 ಹೆಸರುಗಳ ಪಟ್ಟಿ ರಾಜ್ಯ ಕಾಂಗ್ರೆಸ್ ಕೈ ಸೇರಿದೆ. ಪಕ್ಷದ ವೀಕ್ಷಕರ ವರದಿಯೂ ಬಂದಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಕಾರವಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ ದೇಶಪಾಂಡೆ ಈ ಬಾರಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಡಿಎಸ್ ಟ್ರಾಫಿಕ್ ಜಾಮ್ : ಎಸಿಪಿ ತಲೆದಂಡ?
ಡಿ.ವಿ. ತಿರುಗೇಟಿಗೆ ತೆಪ್ಪಗಾದ ವರ್ತೂರು
ಕುತೂಹಲ ಹುಟ್ಟಿಸಿದ ಗೌಡರ ಖಾಕಿ ಕವರ್ ಪೂಜೆ!
ಉಪಚುನಾವಣೆ: ಪಕ್ಷೇತರರ ಮೇಲೆ ತೂಗುಕತ್ತಿ
ನಕ್ಸಲರೊಂದಿಗೆ ಮಾತುಕತೆ ಇಲ್ಲ: ಆಚಾರ್ಯ
'ಕೈ' ಜತೆ ಮೈತ್ರಿಗೆ ಜೆಡಿಎಸ್ ನಕಾರ