ಮದ್ದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವಕಾಶವಾದಿ ರಾಜಕಾರಣಿ. ಅಧಿಕಾರ ಸಿಗುವ ಪಕ್ಷಗಳತ್ತ ಓಡಿಹೋಗುವುದು ಅವರ ಸ್ವಭಾವ ಎಂದು ಎಚ್.ಡಿ. ರೇವಣ್ಣ ಟೀಕಿಸಿದ್ದಾರೆ.
ದಿವಂಗತರಾಗಿರುವ ಮದ್ದೂರು ಶಾಸಕ ಸಿದ್ದರಾಜು ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ತಿ ಮತ್ತು ಸ್ವಯಂ ರಕ್ಷಣೆಗಾಗಿ ತಮ್ಮಣ್ಣ ಪಕ್ಷಾಂತರ ಮಾಡಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಜು ಉತ್ತಮ ಹೋರಾಟಗಾರರಾಗಿದ್ದರು. ಕ್ಷೇತ್ರದ ರೈತರಷ್ಟೇ ಅಲ್ಲದೆ, ಜಿಲ್ಲೆ ಹಾಗೂ ರಾಜ್ಯದ ಅನೇಕ ಸಮಸ್ಯೆಗಳಿಗೆ ದನಿಯಾಗಿ ಸ್ಪಂದಿಸುವ ಗುಣ ಹೊಂದಿದ್ದ ಸಿದ್ದರಾಜು ಅವರ ಆಶಯಗಳ ಈಡೇರಿಕೆಗೆ ಈ ಕ್ಷೇತ್ರದ ಜನ ಮನ್ನಣೆ ನೀಡಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ಅವರನ್ನು ಗೆಲ್ಲಿಸವ ವಿಶ್ವಾಸ ತಮಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ. ರಮೇರ್ಶ, ಅಭ್ಯರ್ಥಿ ಕಲ್ಪನಾ ಸಿದ್ಧರಾಜು, ಪುರಸಭಾ ಅಧ್ಯಕ್ಷ ಶಿವಾನಚಿದ, ವೀರಶೈವ ಅಭಿವೃದ್ದಿ ಸಂಸ್ಥೆ ಅಧ್ಯಕ್ಷ ಬಿ.ವಿ. ಮಂಜುನಾಥ್, ಇನಾಯತ್ ಉಲ್ಲಾಖಾನ್ ಜತೆಗಿದ್ದರು. |