ಉಪಚುನಾವಣೆ ನಡೆಯುತ್ತಿರುವ ಎಂಟು ಕ್ಷೇತ್ರಗಳಿಗೆ ನೇಮಕ ಮಾಡಿದ್ದ ವೀಕ್ಷಕರಲ್ಲಿ ಚುನಾವಣಾ ಆಯೋಗ ಕೆಲವು ಬದಲಾವಣೆ ಮಾಡಿದ್ದು, ಒಟ್ಟು 16 ವೀಕ್ಷಕರು ಶುಕ್ರವಾರದಿಂದ ಕಾರ್ಯ ಆರಂಭಿಸಿದ್ದಾರೆ.
ಪ್ರತಿ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರನ್ನು ಆಯೋಗ ನೇಮಕ ಮಾಡಿದೆ. ಒಬ್ಬರು ಸಾಮಾನ್ಯ ವೀಕ್ಷಕರಾದರೆ ಮತ್ತೊಬ್ಬರು ಖರ್ಜು-ವೆಚ್ಚಗಳ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಹುಕ್ಕೇರಿ ಕ್ಷೇತ್ರಕ್ಕೆ ಕಾಮೇಶ್ವರ ಪ್ರಸಾದ್ ಸಿಂಗ್ ಮತ್ತು ಪ್ರಾಣೇಶ್ ಪಾಠಕ್, ಅರಬಾವಿಗೆ ಜಿ. ವೆಂಕಟರಾಮರೆಡ್ಡಿ ಮತ್ತು ಅನೂಪ್ ಅಗರ್‌ವಾಲ್, ದೇವದುರ್ಗ ಕ್ಷೇತ್ರಕ್ಕೆ ಎಸ್.ಸುರೇಶ್ ಕುಮಾರ್ ಮತ್ತು ರಾಜೇಂದ್ರ ಸಿಂಗ್.
ಕಾರವಾರ ಕ್ಷೇತ್ರಕ್ಕೆ ಮುಖೇಶ್ ಖುಲ್ಲರ್ ಮತ್ತು ಹೇಮಂತ ಅಶೋಕ್ ಭಟ್. ತುರುವೇರೆಕೆ ಕ್ಷೇತ್ರಕ್ಕೆ ಬಲರಾಮ್ ಶರ್ಮ ಮತ್ತು ಅಜಯ್ ಸಕ್ಸೇನಾ.
ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಗೌತಮ್ ಘೋಷ್ ಮತ್ತು ಸಮಂಜನ್ ದಾಸ್, ಮದ್ದೂರು ಕ್ಷೇತ್ರಕ್ಕೆ ಕಕುಮಾನು ಶಿವಪ್ರಸಾದ್ ಮತ್ತು ರಾಜ್ ಪಾಲ್ ಶರ್ಮ, ಮಧುಗಿರಿ ಕ್ಷೇತ್ರಕ್ಕೆ ಸಂದೀಪ್ ವರ್ಮ ಮತ್ತು ಅವದೇಶ್ ಕುಮಾರ್ ಸಿಂಗ್ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. |