ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಿನಲ್ಲಿ ಯುಎನ್ಎಲ್ಎಫ್ ಉಗ್ರರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಯುಎನ್ಎಲ್ಎಫ್ ಉಗ್ರರ ಬಂಧನ
ಬೆಂಗಳೂರು ಪೊಲೀಸರಿಗೆ ಮಾಹಿತಿಯೇ ಇಲ್ಲ!
ನಗರದ ಪೀಣ್ಯ ಸಮೀಪದ ಗದರನಹಳ್ಳಿಯಲ್ಲಿ ಇಬ್ಬರು ಯುಎನ್ಎಲ್ಎಫ್ ಉಗ್ರರನ್ನು ಬಂಧಿಸಿರುವ ಸೇನಾ ಗುಪ್ತಚರ ಸಿಬ್ಬಂದಿ ಮತ್ತು ಮಣಿಪುರ ಪೊಲೀಸರು, ಅವರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಇಂಫಾಲದ ಸಾರ್ಜೆಂಟ್ ಹಿಮನ್ ರಾಜು ಕುಮಾನ್ ಸಿಂಗ್ (30) ಮತ್ತು ಶಾಂಪುರದ ತೋಕಚಮ್ ರಾಜನ್ ಸಿಂಗ್ (44) ಬಂಧಿತರು. ಇವರ ಗುಂಪಿನ ಪ್ರಮುಖ ಉಗ್ರ ಮಾಗಡಿ ರಸ್ತೆ ಸುತ್ತಮುತ್ತಲ ಅಜ್ಞಾತ ಸ್ಥಳವೊಂದರಲ್ಲಿ ಮರೆಸಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ. ಬಂಧಿತರು ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುಎನ್ಎಲ್ಎಫ್) ಸಂಘಟನೆಗೆ ಸೇರಿದವರು.

ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಿದ ಮತ್ತು ಈಶಾನ್ಯ ರಾಜ್ಯಗಳಲ್ಲಿ ಜನರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ ಆರೋಪಗಳು ಇವರ ಮೇಲಿವೆ. ಸೇನಾ ಸಿಬ್ಬಂದಿ ರಾಜನ್ ಸಿಂಗ್‌‌ನನ್ನು 2002ರಲ್ಲಿ ಬಂಧಿಸಿದರಾದರು , ಅಲ್ಲಿಂದ ತಪ್ಪಿಸಿಕೊಂಡು ಈತ ತಲೆಮರೆಸಿಕೊಂಡಿದ್ದು.

ಬಂಧಿತರು ಬೆಂಗಳೂರಿನಲ್ಲಿ ಯುಎನ್‌ಎಲ್‌ಎಫ್ ಸ್ಲೀಪರ್ ಸೆಲ್ (ಜನಸಾಮಾನ್ಯರಂತೆ ಇದ್ದು ಉಗ್ರಗಾಮಿ ಚಟುವಟಿಕೆ ನಡೆಸುವುದು) ಸದಸ್ಯರು ಎಂದು ತಿಳಿದುಬಂದಿದ್ದು, ಮಣಿಪುರದಲ್ಲಿ ನಡೆದ ಅನೇಕ ಬಾಂಬ್ ಸ್ಫೋಟ ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಉಗ್ರರ ಬಂಧನ: ನಗರ ಪೊಲೀಸರಿಗೇ ಮಾತಿಹಿ ಇಲ್ಲ !

ಯುಎನ್ಎಲ್ಎಫ್ ಉಗ್ರರನ್ನು ಬೆಂಗಳೂರಿನಲ್ಲಿ ಬಂಧಿಸಿರುವ ಕುರಿತು ನಗರ ಪೊಲೀಸರಿಗೇ ಮಾಹಿತಿ ಇಲ್ಲ. ಹೌದು ಸೇನಾ ಗುಪ್ತಚರ ಸಿಬ್ಬಂದಿ ಮತ್ತು ಮಣಿಪುರ ಪೊಲೀಸರು ಉಗ್ರರನ್ನು ವಶಕ್ಕೆ ತೆಗೆದುಕೊಂಡ ನಂತರವಷ್ಟೇ ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು.

ನಗರದ ಕೈಗಾರಿಕಾ ಪ್ರದೇಶವಾದ ಪೀಣ್ಯದಲ್ಲೇ ಉಗ್ರರು ನೆಲೆಸಿದ್ದದೂ ಬೆಂಗಳೂರು ಪೊಲೀಸರು ಅವರ ವಾಸನೆ ಗ್ರಹಿಸುವಲ್ಲಿ ವಿಫಲರಾಗಿದ್ದಾರೆ. ಮುಂಬೈನ ತಾಜ್ ಹೋಟೆಲ್ ಮೇಲೆ ದಾಳಿ ಪ್ರಕರಣದ ನಂತರ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಗುಪ್ತಚರ ವ್ಯವಸ್ಥೆ ಬಲಪಡಿಸಲಾಗಿದೆ ಎಂದು ಪೊಲಿಸರು ಹೇಳುತ್ತಿದ್ದರೂ ಈ ಪ್ರಕರಣದಿಂದ ಪೊಲೀಸ್ ಗುಪ್ತಚರ ಇಲಾಖೆಯ ವೈಫಲ್ಯ ಮತ್ತೆ ಸಾಬೀತಾಗಿದೆ.

ಈ ಹಿಂದೆ 6 ಪಾಕ್ ಉಗ್ರರನ್ನು ಇದೇ ರೀತಿ ಬಂಧಿಸಿದಾಗಲೂ ಪೊಲಿಸರು ಇದೇ ಹೇಳಿಕೆ ನೀಡಿದ್ದರು. ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟ ನಡೆದು ಓರ್ವ ಮಹಿಳೆ ಸಾವನ್ನಪ್ಪಿರುವುದು ಘಟನೆ ನೆನಪಿನಿಂದ ಮಾಸುವ ಮುನ್ನ ಗುಪ್ತಚರ ವ್ಯವಸ್ಥೆಯ ವೈಫಲ್ಯತೆ ನಗರದ ಜನರಲ್ಲಿ ಆತಂಕ ಹೆಚ್ಚಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಂಗ್ರೆಸ್-ಬಿಜೆಪಿ ನೇರಸ್ಪರ್ಧೆ: ದೇಶಪಾಂಡೆ
ಕೆಎಸ್‌‌ಆರ್‌‌ಟಿಸಿ: ಶೇ.6ರಷ್ಟು ವೇತನ ಹೆಚ್ಚಳ
ಚನ್ನಪಟ್ಟಣ: 7 ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ
ಉಪಚುನಾವಣೆ: ಪ್ರತಿ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರು
'ದತ್ತ ಭಕ್ತ'ನಿಗೆ ಶಾಸಕ ರವಿ ಕಪಾಳಮೋಕ್ಷ
ತಮ್ಮಣ್ಣ ಅವಕಾಶವಾದಿ ರಾಜಕಾರಣಿ: ರೇವಣ್ಣ