ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವಂಚನೆ ಪ್ರಕರಣ: ಇಂದ್ರಜಿತ್ ಬಂಧನ-ಬಿಡುಗಡೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಂಚನೆ ಪ್ರಕರಣ: ಇಂದ್ರಜಿತ್ ಬಂಧನ-ಬಿಡುಗಡೆ
ವಂಚನೆ ಆರೋಪದ ಮೇಲೆ ಶುಕ್ರವಾರ ರಾತ್ರಿ ಸಿಸಿಬಿ ಪೊಲೀಸರಿಂದ ಬಂಧಿಸಲ್ಪಟ್ಟ ಪತ್ರಕರ್ಕ ಹಾಗೂ ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ನ್ಯಾಯಾಲಯ ಶನಿವಾರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.

ಚಿತ್ರ ನಿರ್ಮಾಣ ಮಾಡಲೆಂದು ನೀಡಿದ್ದ ಹಣವನ್ನು ಲೆಕ್ಕಪತ್ರ ನೀಡದೆ ವಂಚಿಸಿದ್ದಾರೆ ಎಂದು ಆರು ತಿಂಗಳ ಹಿಂದೆ ಹಲಸೂರು ಪೊಲೀಸರಿಗೆ ಉದ್ಯಮಿ ಅಶೋಕ್ ಖೇಣಿ ದೂರು ನೀಡಿದ್ದರು. ಪೊಲೀಸ್ ಆಯುಕ್ತ ಶಂಕರ ಬಿದರಿ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದರು.

ಸಿಸಿಬಿ ಪೊಲೀಸ್ ಇನ್ಸ್‌‌ಪೆಕ್ಟರ್ ಅಶೋಕನ್ ಹಾಗೂ ಬಾಳೇಗೌಡ, ಇಂದ್ರಜಿತ್ ಲಂಕೇಶ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಿ ವಿಚಾರಣೆ ನಡೆಸಿದ್ದರು.ಈ ಪ್ರಕರಣದಲ್ಲಿ ಖೇಣಿ ನೀಡಿರುವ ದೂರಿನ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಸಿದ್ದರಾಮಯ್ಯ ತಿಳಿಸಿದ್ದರು.

ಹಿಂದೆ ಶಾದಿ ಕೆ ಬಾದ್ ಸೈಡ್ ಎಫೆಕ್ಟ್ ಎಂಬ ಹಿಂದಿ ಚಿತ್ರ ನಿರ್ದೇಶನಕ್ಕಾಗಿ ಖೇಣಿ ಇಂದ್ರಜಿತ್‌‌ಗೆ ನೀಡಿದ್ದ 92 ಲಕ್ಷ ರೂ.ಗಳ ಎರಡು ಚೆಕ್‌‌ಗಳು ಬೌನ್ಸ್ ಆಗಿದ್ದವು. ಈ ಸಂಬಂಧ ಇಂದ್ರಜಿತ್ ಅವರು ಖೇಣಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ಅದು ವಿಚಾರಣೆಯಲ್ಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರಿನಲ್ಲಿ ಯುಎನ್ಎಲ್ಎಫ್ ಉಗ್ರರ ಬಂಧನ
ಕಾಂಗ್ರೆಸ್-ಬಿಜೆಪಿ ನೇರಸ್ಪರ್ಧೆ: ದೇಶಪಾಂಡೆ
ಕೆಎಸ್‌‌ಆರ್‌‌ಟಿಸಿ: ಶೇ.6ರಷ್ಟು ವೇತನ ಹೆಚ್ಚಳ
ಚನ್ನಪಟ್ಟಣ: 7 ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ
ಉಪಚುನಾವಣೆ: ಪ್ರತಿ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರು
'ದತ್ತ ಭಕ್ತ'ನಿಗೆ ಶಾಸಕ ರವಿ ಕಪಾಳಮೋಕ್ಷ