ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನಮ್ಮದು ಮಾತ್ರ ಕುಟುಂಬ ರಾಜಕಾರಣಾನಾ?: ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಮ್ಮದು ಮಾತ್ರ ಕುಟುಂಬ ರಾಜಕಾರಣಾನಾ?: ಗೌಡ
ಗೌಡರದ್ದು ಕುಟುಂಬ ರಾಜಕಾರಣ, ಅಪ್ಪ-ಮಕ್ಕಳ ರಾಜಕಾರಣ, ಗಂಡ-ಹೆಂಡಿರ ರಾಜಕಾರಣ ಎಂದೆಲ್ಲ ಆರೋಪ ಹೊರಿಸುತ್ತಿರುವವರಿಗೆ ತಿರುಗೇಟು ನೀಡಿರುವ ಜೆಡಿಎಸ್ ವರಿಷ್ಠ ದೇವೇಗೌಡ, ಕುಟುಂಬ ರಾಜಕಾರಣ ನಾವು ಮಾತ್ರ ಮಾಡುತ್ತಿರುವುದಲ್ಲ ಅದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ಕೊಡಬಲ್ಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ, ದೇವದುರ್ಗಕ್ಕೆ ಹೊರಟ ಸಂದರ್ಭದಲ್ಲಿ, ಮಧುಗಿರಿ ಕ್ಷೇತ್ರದಲ್ಲಿ ಸೊಸೆ ಅನಿತಾಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದರು.

ಮಧುಗಿರಿ ಕ್ಷೇತ್ರದಲ್ಲಿ ವೀರಭದ್ರಯ್ಯ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿತ್ತು, ಆದರೆ ಆಡಳಿತಾರೂಢ ಬಿಜೆಪಿ ಸರಕಾರ ಅವರಿಗೆ ಉದ್ದೇಶಪೂರ್ವಕವಾಗಿ ಸ್ವಯಂ ನಿವೃತ್ತಿಗೆ ಅವಕಾಶ ನೀಡದೆ ಅನಗತ್ಯ ವಿಳಂಬ ಮಾಡಿದರು. ಆ ನಿಟ್ಟಿನಲ್ಲಿ ನಮ್ಮ ಸೊಸೆಯನ್ನು ಕಣಕ್ಕಿಳಿಸಲು ಯಡಿಯೂರಪ್ಪ ಅವರೇ ಕಾರಣ ಎಂದು ಸಮರ್ಥನೆ ನೀಡಿದರು.

ಕುಟುಂಬ ರಾಜಕಾರಣ ಎಂದು ನಮ್ಮನ್ನು ಜರೆಯುತ್ತಿರುವವರು, ಜಾಲಪ್ಪ, ಬಂಗಾರಪ್ಪ, ದೇವಿಲಾಲ್, ಪಿ.ಎ.ಸಂಗ್ಮಾ, ಅಮೆರಿಕದ ಬುಷ್, ಕ್ಲಿಂಟನ್ ಅವರೆಲ್ಲ ಮಾಡುತ್ತಿರುವುದು ಏನನ್ನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ತಮ್ಮ ಮಗನನ್ನು ಮುಂದಿನ ಲೋಕಸಭಾ ಅಭ್ಯರ್ಥಿಯನ್ನಾಗಿಸುವ ಹವಣಿಕೆಯಲ್ಲಿದ್ದಾರಲ್ಲ ಇದಕ್ಕೆ ಏನೆನ್ನುತ್ತೀರಿ ಎಂದು ತಿರುಗೇಟು ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಂಚನೆ ಪ್ರಕರಣ: ಇಂದ್ರಜಿತ್ ಲಂಕೇಶ್ ವಿಚಾರಣೆ
ಬೆಂಗಳೂರಿನಲ್ಲಿ ಯುಎನ್ಎಲ್ಎಫ್ ಉಗ್ರರ ಬಂಧನ
ಕಾಂಗ್ರೆಸ್-ಬಿಜೆಪಿ ನೇರಸ್ಪರ್ಧೆ: ದೇಶಪಾಂಡೆ
ಕೆಎಸ್‌‌ಆರ್‌‌ಟಿಸಿ: ಶೇ.6ರಷ್ಟು ವೇತನ ಹೆಚ್ಚಳ
ಚನ್ನಪಟ್ಟಣ: 7 ಜೆಡಿಎಸ್ ಸದಸ್ಯರು ಕಾಂಗ್ರೆಸ್‌ಗೆ
ಉಪಚುನಾವಣೆ: ಪ್ರತಿ ಕ್ಷೇತ್ರಕ್ಕೆ ಇಬ್ಬರು ವೀಕ್ಷಕರು