ರಾಜ್ಯ ಸರಕಾರ ಜಾರಿಗೆ ತಂದಿರುವ ನೂತನ ಖನಿಜ ನೀತಿ ಅಸಮಂಜಸ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ನಗರದಲ್ಲಿ ವಕೀಲರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾರಂಭಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ಹೊಸ ಖನಿಜ ನೀತಿ ಎಲ್ಲರಿಗೂ ಅನುಕೂಲವಾಗುವಂಥದ್ದಲ್ಲ ಎಂದಿರುವ ಅವರು, ಈ ನೀತಿಯಲ್ಲಿ ಹಲವು ಬದಲಾವಣೆ ತರಬೇಕಿದೆ ಎಂದು ಹೇಳಿದರು.
ಗಣಿಗಾರಿಕೆಗೆ ಈಗಾಗಲೇ ನೀಡಿರುವ ಪರವಾನಿಗೆ ಇದ್ದವರಿಗೆ ಮಾತ್ರ ಮುಂದೆ ಗಣಿಗಾರಿಕೆ ಮಾಡಲು ಅವಕಾಶವಿದೆ. ಮುಂದೆ ಯಾವುದೇ ಹೊಸ ಗಣಿಗಾರಿಕೆ ಪರವಾನಿಗೆ ನೀಡದಿರುವುದಾಗಿ ಈ ನೂತನ ಖನಿಜ ನೀತಿಯ ಪ್ರಮುಖ ಅಂಶ.
ಇದರಿಂದಾಗಿ ಪ್ರಸ್ತುತ ಇರುವ ಗಣಿಗಾರಿಕೆಯ ಅಸಂಬದ್ಧ ಚಟುವಟಿಕೆಗಳು ಮುಂದುವರಿಯಲಿವೆ ಎಂದು ಹೆಗ್ಡೆ ಈ ಸಂದರ್ಭದಲ್ಲಿ ಆರೋಪಿಸಿದರು. |