ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಅಭಿವೃದ್ಧಿ ಪರ ರಾಜಕಾರಣಕ್ಕೆ ಕಲಾಂ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಭಿವೃದ್ಧಿ ಪರ ರಾಜಕಾರಣಕ್ಕೆ ಕಲಾಂ ಕರೆ
ಅಭಿವೃದ್ಧಿಪರ ರಾಜಕೀಯ ಮಾಡಿ ಚುನಾವಣೆಯ ಗೆಲ್ಲಲು ಪ್ರಯತ್ನಿಸಿ ಇದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಾಸಕರಿಗೆ ನೀಡಿದ ಸಲಹೆ.

ನಗರದಲ್ಲಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ನೂತನ ಸದಸ್ಯರಿಗೆ ಆಯೋಜಿಸಿದ್ದ ಪ್ರಶಿಕ್ಷಣ ಶಿಬಿರದಲ್ಲಿ ಕಲಾಂ ಮೇಷ್ಟ್ರ ರೀತಿಯಲ್ಲಿ ಸದಸ್ಯರಿಗೆ ಬೋಧಿಸಿದರು.

ಅಭಿವೃದ್ಧಿ ರಾಜಕೀಯ ಎಷ್ಟು ಹೆಚ್ಚಾಗುವುದೋ ಆ ರಾಜಕೀಯದ ಬಗ್ಗೆ ಜನಸಾಮಾನ್ಯರಲ್ಲಿ ಗೌರವವೂ ಹೆಚ್ಚುತ್ತದೆ. ರಾಜಕಾರಣದ ರಾಜಕೀಯ ಚುನಾವಣೆಗಾಗಿ ಬೇಕಾಗಿತ್ತು. ಆದರೆ, ತಾವು ಈಗಾಗಲೇ ಆ ಹಂತ ದಾಟಿದ್ದೀರಿ. ಇಂದು ನಿಮ್ಮ ಕ್ಷೇತ್ರಕ್ಕೆ ಬೇಕಾಗಿರುವುದು ಅಭಿವೃದ್ಧಿ ಹಾಗೂ ಸಮರ್ಥ ನಾಯಕತ್ವದ ರಾಜಕೀಯ ಎಂದು ಕಿವಿಮಾತು ಹೇಳಿದರು.

ಒಂದು ವಿಧಾನಸಭಾ ಅಥವಾ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಎಂದರೆ ಹೇಗಿರಬೇಕು ಎಂಬುದನ್ನು ಅಬ್ದುಲ್ ಕಲಾಂ ಸ್ಪಷ್ಟಪಡಿಸಿದರು. ಅದಕ್ಕಾಗಿ ಹಲವು ಸೂತ್ರಗಳನ್ನು ಸದಸ್ಯರಿಗೆ ನೀಡಿದರು.

ಬಡತನ ರಹಿತ, ಅಪರಾಧ ರಹಿತ ಹಾಗೂ ಪ್ರತಿಯೊಬ್ಬ ಸಾರ್ವಜನಿಕರಿಗೂ ಪಕ್ಷಪಾತವಿಲ್ಲದ ರೀತಿಯಲ್ಲಿ ಗೌರವ ಜೀವನ ದೊರೆಯುವಂಥ ಕ್ಷೇತ್ರವಾಗಿರಬೇಕು ಎಂಬುದು ಕಲಾಂ ನುಡಿ.

ವಿಧಾನಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ, ಸಚಿವರಾದ ಶೋಭಾ ಕರಂದ್ಲಾಜೆ, ಬಿ.ಎನ್ ಬಚ್ಚೇಗೌಡ ಸೇರಿದಂತೆ ಹಲವು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರು ಈಗ ನ್ಯಾನೋ ಸಿಟಿ
ಖನಿಜ ನೀತಿ ವಿರುದ್ಧ ಲೋಕಾಯುಕ್ತ ಹೆಗ್ಡೆ ಆಕ್ರೋಶ
ಶಾಸಕರಿಗೆ ಡಾ. ಕಲಾಂ ಪಾಠ
ಕನ್ನಡಿಗರಿಗೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು ಆಕ್ರೋಶ
ಎಸ್‌‌ಬಿಐನಲ್ಲೂ ಕನ್ನಡಿಗರಿಗೆ ಅನ್ಯಾಯ: ರೆಡ್ಡಿ
ನಮ್ಮದು ಮಾತ್ರ ಕುಟುಂಬ ರಾಜಕಾರಣಾನಾ?: ಗೌಡ