ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ವೈಟ್ ಟೈಗರ್ ಕಳಪೆ ಪುಸ್ತಕ : ಕುಂ.ವೀ. ಅಭಿಮತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೈಟ್ ಟೈಗರ್ ಕಳಪೆ ಪುಸ್ತಕ : ಕುಂ.ವೀ. ಅಭಿಮತ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಎನಿಸಿರುವ ಬುಕರ್ ಪ್ರಶಸ್ತಿ ಪಡೆದ ಕನ್ನಡಿಗ ಅರವಿಂದ ಅಡಿಗರ ‘ದಿ ವೈಟ್ ಟೈಗರ್’ ಕೃತಿ ‘ಅತ್ಯಂತ ಕಳಪೆ’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಕುಂ.ವೀರಭದ್ರಪ್ಪ ಟೀಕಿಸಿದ್ದಾರೆ.

ರಂಗತರಂಗ ಹಾಗೂ ಮೈಸೂರು ಸಂವಹನ ಪ್ರಕಾಶ ಸಂಸ್ಥೆ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ವೈಟ್ ಟೈಗರ್‌ಗಿಂತ ಸೃಜನಶೀಲ ಕಥೆಗಳು ನಮ್ಮಲ್ಲಿವೆ. ಕನ್ನಡದ ಕಥೆಗಳು ಸರಿಯಾಗಿ ಅನುವಾದ ಆಗಿದ್ದರೆ ಇಷ್ಟೊತ್ತಿಗೆ ಏಳೆಂಟು ನೊಬೆಲ್ ಪ್ರಶಸ್ತಿಗಳು ಬರಬೇಕಾಗಿತ್ತು ಎಂದವರು ಅಭಿಪ್ರಾಯಪಟ್ಟರು.

ಕನ್ನಡ ಲೇಖಕರಲ್ಲಿ ದೊಡ್ಡ ಶಕ್ತಿ ಇದೆ. ಎಸ್.ಎಲ್.ಬೈರಪ್ಪ, ಯು.ಆರ್.ಅನಂತಮೂರ್ತಿ ಅವರಿಗಿಂತ ಅತ್ಯುತ್ತಮ ಕಥೆಗಾರರು ನಮ್ಮಲ್ಲಿದ್ದಾರೆ. ಲೇಖಕ ಸಮಾಜವನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಆತ ಕನ್ನಡ ಪರಂಪರೆಯನ್ನು ಪಂಪ, ರನ್ನ ಅವರ ಕಾವ್ಯಗಳನ್ನು ಆವರಿಸಿಕೊಳ್ಳುವ ವಿದ್ವತ್ ಹೊಂದಿರಬೇಕೆಂದು ಹೇಳಿದರು. ಕಥೆಗಳನ್ನು ಜನ ಸಾಮಾನ್ಯರು ಓದಬೇಕು. ಲೇಖಕ ತನ್ನ ಜೀವನದಲ್ಲಿ ಕಂಡುಕೊಂಡ ಸತ್ಯವನ್ನು ಧ್ವನಿ ಪೂರ್ಣ ಮಾತಿಗಳಲ್ಲಿ ಹೇಳುತ್ತಾ ಹೋಗಬೇಕು ಎಂದು ಅವರು ಹೇಳಿದರು.

ಲೇಖಕನಾದವ ವಿಶಿಷ್ಟವಾದ ಒಳ ವಿನ್ಯಾಸವನ್ನು ಕಥೆಯಲ್ಲಿ ಕಟ್ಟಿಕೊಡಬೇಕು. ಎಲ್ಲರಿಗಿಂತ ಭಿನ್ನವಾಗಿ ಬರೆಯುವ ಕೆಚ್ಚೆದೆ ಯುವ ಲೇಖಕರಲ್ಲಿದೆ. ಅವರು ಮುಂದೆ ಬರಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದರಾಮಯ್ಯ ಬರುವುದಾದರೆ ಸ್ವಾಗತ: ಬಿಜೆಪಿ
ಅಭಿವೃದ್ಧಿ ಪರ ರಾಜಕಾರಣಕ್ಕೆ ಕಲಾಂ ಕರೆ
ಬೆಂಗಳೂರು ಈಗ ನ್ಯಾನೋ ಸಿಟಿ
ಖನಿಜ ನೀತಿ ವಿರುದ್ಧ ಲೋಕಾಯುಕ್ತ ಹೆಗ್ಡೆ ಆಕ್ರೋಶ
ಶಾಸಕರಿಗೆ ಡಾ. ಕಲಾಂ ಪಾಠ
ಕನ್ನಡಿಗರಿಗೆ ಅನ್ಯಾಯ: ಮುಖ್ಯಮಂತ್ರಿ ಚಂದ್ರು ಆಕ್ರೋಶ