ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಿಮೂ ಹೆಸರು ಶಿಫಾರಸು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಿಮೂ ಹೆಸರು ಶಿಫಾರಸು
ಅಖಿಲ ಭಾರತ 75ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿಯವರನ್ನು ಆಯ್ಕೆ ಮಾಡುವಂತೆ ಕಸಾಪದ ಜಿಲ್ಲಾ ಘಟಕ ನಿರ್ಣಯ ಕೈಗೊಂಡು ಪರಿಷತ್‌ನ ಕೇಂದ್ರ ಸಮಿತಿಗೆ ಶಿಫಾರಸು ಮಾಡಿದೆ.

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ನಡೆಯುವ ಸಮ್ಮೇಳನದ ಅಧ್ಯಕ್ಷರ ಹೆಸರು ಸೂಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಸಾಕಷ್ಟು ಗೊಂದಲದ ನಡುವೆಯೂ ಡಾ.ಚಿದಾನಂದ ಮೂರ್ತಿ ಅವರ ಹೆಸರನ್ನು ಶಿಫಾರಸು ಮಾಡುವ ಒಂದು ಸಾಲಿನ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಅಂತಿಮವಾಗಿ ಡಾ.ಎಂ.ಚಿದಾನಂದ ಮೂರ್ತಿ, ಡಾ.ಎಲ್.ಬಸವರಾಜು ಹಾಗೂ ಪ್ರೊ.ಬರಗೂರು ರಾಮಚಂದ್ರಪ್ಪ ಅವರ ಹೆಸರುಗಳನ್ನು ಕೇಂದ್ರ ಸಾಹಿತ್ಯ ಪರಿಷತ್‌ಗೆ ಕಳುಹಿಸಬೇಕೆಂಬ ಒತ್ತಾಯ ಕೇಳಿ ಬಂದಿತು. ಕೆಲವು ಸಾಹಿತಿಗಳು ಚಿದಾನಂದ ಮೂರ್ತಿ ಅವರೊಬ್ಬರ ಹೆಸರನ್ನು ಮಾತ್ರ ಕಳುಹಿಸಬೇಕೆಂದು ಪಟ್ಟು ಹಿಡಿದರು. ಇನ್ನೂ ಕೆಲವರು ಮೂವರ ಹೆಸರನ್ನೂ ಕಳುಹಿಸಲು ಆಗ್ರಹಿಸಿದರು.

ಚಿದಾನಂದ ಮೂರ್ತಿಯವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾದುದರಿಂದ ಅವರ ಹೆಸರನ್ನೇ ಅಂತಿಮಗೊಳಿಸಿ ಕೇಂದ್ರ ಪರಿಷತ್ತಿಗೆ ಕಳುಹಿಸಿ ಕೊಡಬೇಕೆಂದು ಸಂಶೋಧಕ ಡಾ.ರಾಜಶೇಖರಪ್ಪ ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವೈಟ್ ಟೈಗರ್ ಕಳಪೆ ಪುಸ್ತಕ : ಕುಂ.ವೀ. ಅಭಿಮತ
ಸಿದ್ದರಾಮಯ್ಯ ಬರುವುದಾದರೆ ಸ್ವಾಗತ: ಬಿಜೆಪಿ
ಅಭಿವೃದ್ಧಿ ಪರ ರಾಜಕಾರಣಕ್ಕೆ ಕಲಾಂ ಕರೆ
ಬೆಂಗಳೂರು ಈಗ ನ್ಯಾನೋ ಸಿಟಿ
ಖನಿಜ ನೀತಿ ವಿರುದ್ಧ ಲೋಕಾಯುಕ್ತ ಹೆಗ್ಡೆ ಆಕ್ರೋಶ
ಶಾಸಕರಿಗೆ ಡಾ. ಕಲಾಂ ಪಾಠ