ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಟೀಕಾಕಾರರಿಗೆ ಮತದಾರನಿಂದ ಪಾಠ: ಅನಿತಾ ಕುಮಾರಸ್ವಾಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೀಕಾಕಾರರಿಗೆ ಮತದಾರನಿಂದ ಪಾಠ: ಅನಿತಾ ಕುಮಾರಸ್ವಾಮಿ
ತನ್ನ ಅಭ್ಯರ್ಥಿತನವನ್ನು ಟೀಕಿಸುತ್ತಿರುವ ಪ್ರತಿಪಕ್ಷದವರ ನಾಲಿಗೆಗೆ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆಂದು ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

'ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಪ್ರತಿಪಕ್ಷದವರು ಮಾಡುತ್ತಿದ್ದಾರೆ. ನನ್ನ ಮನೆ ಬಾಗಿಲು ಸದಾ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಪತಿ ಕುಮಾರಸ್ವಾಮಿ ಅವರನ್ನು ಕಾಣಲು ರಾಜ್ಯಾದ್ಯಂತ ಲಕ್ಷಾಂತರ ಮಂದಿ ಬಂದಾಗ ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂಧಿಸಿದ್ದೇನೆ' ಎಂದರು.

ಮಧುಗಿರಿ ಕ್ಷೇತ್ರ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಹಿಂದುಳಿದ ಪ್ರದೇಶ. ನನ್ನ ವಿದ್ಯೆ ಹಾಗೂ ಜ್ಞಾನವನ್ನು ಉಪಯೋಗಿಸಿ ರಾಮನಗರದ ಮಾದರಿಯಲ್ಲೇ ಅಭಿವೃದ್ಧಿಪಡಿಸುತ್ತೇನೆ. ಈ ಕ್ಷೇತ್ರದಲ್ಲಿ ಬಡತನ ತಾಂಡವವಾಡುತ್ತಿದೆ. ರಸ್ತೆಗಳು ನಡೆದಾಡಲು ಕೂಡ ಆಗದಂತಹ ದುಃಸ್ಥಿತಿಯಲ್ಲಿದೆ. ಈ ಹಿಂದೆ ಗೆದ್ದ ಶಾಸಕರು ಯಾವುದೇ ಅಭಿವೃದ್ದಿ ಕಾರ್ಯ ಕೈಗೊಂಡಿಲ್ಲ ಎಂದು ಅವರು ಟೀಕಿಸಿದರು.

'ಪ್ರತಿಪಕ್ಷಗಳು ಒಡ್ಡುವ ಯಾವುದೇ ಆಸೆ ಆಕಾಂಕ್ಷೆಗಳಿಗೆ ಬಲಿಯಾಗದೇ ನಮ್ಮ ಪಕ್ಷವನ್ನು ಬೆಂಬಲಿಸಿ. ಗ್ರಾಮಗಳ ಸಮಸ್ಯೆಯನ್ನು ಸ್ವತಃ ನಾನೇ ನಿಂತು ಬಗೆಹರಿಸುತ್ತೇನೆ' ಎಂದ ಅವರು, ನನ್ನ ಪತಿ ಕೈಗೊಂಡ ಉತ್ತಮ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಿಮೂ ಹೆಸರು ಶಿಫಾರಸು
ವೈಟ್ ಟೈಗರ್ ಕಳಪೆ ಪುಸ್ತಕ : ಕುಂ.ವೀ. ಅಭಿಮತ
ಸಿದ್ದರಾಮಯ್ಯ ಬರುವುದಾದರೆ ಸ್ವಾಗತ: ಬಿಜೆಪಿ
ಅಭಿವೃದ್ಧಿ ಪರ ರಾಜಕಾರಣಕ್ಕೆ ಕಲಾಂ ಕರೆ
ಬೆಂಗಳೂರು ಈಗ ನ್ಯಾನೋ ಸಿಟಿ
ಖನಿಜ ನೀತಿ ವಿರುದ್ಧ ಲೋಕಾಯುಕ್ತ ಹೆಗ್ಡೆ ಆಕ್ರೋಶ