ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೊಡ್ಡಬಳ್ಳಾಪುರ ಚುನಾವಣಾಧಿಕಾರಿ ಬದಲು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೊಡ್ಡಬಳ್ಳಾಪುರ ಚುನಾವಣಾಧಿಕಾರಿ ಬದಲು
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಧಿಕಾರಿಯಾಗಿದ್ದ ಶಿವಪ್ರಸಾದ್ ಅವರನ್ನು ರಾಜ್ಯ ಚುನಾವಣಾ ಆಯೋಗ ಹಿಂದೆ ಕರೆಸಿಕೊಂಡಿದೆ.

ಶಿವಪ್ರಸಾದ್ ಸಚಿವ ಈಶ್ವರಪ್ಪ ಅವರ ಅಳಿಯನಾಗಿದ್ದು, ಅವರು ಚುನಾವಣೆಯಲ್ಲಿ ನ್ಯಾಯಸಮ್ಮತ ರೀತಿಯಲ್ಲಿ ವರ್ತಿಸುವುದು ಅನುಮಾನವೆಂದು ಕಾಂಗ್ರೆಸ್ ದೂರು ನೀಡಿತ್ತು.

ದೂರನ್ನು ರಾಜ್ಯ ಚುನವಣಾ ಮುಖ್ಯ ಆಯುಕ್ತ ಎಂ.ಎನ್. ವಿದ್ಯಾಶಂಕರ್ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಕೇಂದ್ರ ಚುನಾವಣಾ ಆಯೋಗವು ಕಾಂಗ್ರೆಸ್ ನೀಡಿದ ದೂರನ್ನು ಪರಿಗಣಿಸಿದ್ದು, ಶಿವಪ್ರಸಾದ್ ಅವರ ಬದಲಿಗೆ ಬೇರೆ ಅಧಿಕಾರಿಯನ್ನು ನಿಯೋಜಿಸುವಂತೆ ಸೂಚನೆ ನೀಡಿದೆ.

ಇಂದು ಈ ಕುರಿತು ಪೂರ್ವಭಾವಿ ಸಮಾಲೋಚನೆ ನಡೆದಿದ್ದು, ಸಂಜೆಯ ವೇಳೆಗೆ ಬದಲಿ ಅಧಿಕಾರಿಯನ್ನು ನೀಯೋಜಿಸಲು ನಿರ್ಧಸಲಾಗಿದೆ.

ಇದಲ್ಲದೆ ಮಧುಗಿರಿ ಸೇರಿದಂತೆ 13 ಜನರ ಸಬ್‌ರಿಜಿಸ್ಟ್ರಾರ್ ವರ್ಗಾವಣೆ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಮಧುಗಿರಿಗೆ ನೇಮಕೊಂಡಿರುವ ಸಬ್‌ರಿಜಿಸ್ಟ್ರಾರ್ ಬಸವರಾಜ್ ಪ್ರಕರಣ ಕುರಿತು ಕಂದಾಯ ಇಲಾಖೆಯಿಂದ ಮಾಹಿತಿ ಪಡೆಯಲಾಗುವುದು ಎಂದು ವಿದ್ಯಾಶಂಕರ್ ತಿಳಿಸಿರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿ ಕಾಟ
ಪಕ್ಷಾಂತರ ಕಾಯ್ದೆ ತಿದ್ದುಪಡಿಗೆ ಗೌಡರ ಒತ್ತಾಯ
ಬಿಜೆಪಿಗೆ ಸಿದ್ದು ಬೆಂಬಲ: ಹೊರಟ್ಟಿ ಆರೋಪ
ಟೀಕಾಕಾರರಿಗೆ ಮತದಾರನಿಂದ ಪಾಠ: ಅನಿತಾ ಕುಮಾರಸ್ವಾಮಿ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಿಮೂ ಹೆಸರು ಶಿಫಾರಸು
ವೈಟ್ ಟೈಗರ್ ಕಳಪೆ ಪುಸ್ತಕ : ಕುಂ.ವೀ. ಅಭಿಮತ