ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > 20 ಲಕ್ಷ ಅಭ್ಯರ್ಥಿಗಳಿಗೆ ಕಳುಹಿಸಿದ ಹಣ: ಗೌಡ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
20 ಲಕ್ಷ ಅಭ್ಯರ್ಥಿಗಳಿಗೆ ಕಳುಹಿಸಿದ ಹಣ: ಗೌಡ
NRB
ಜೆಡಿಎಸ್ ಬೆಂಬಲಿಗರಿಂದ ವಶಪಡಿಸಿಕೊಂಡಿರುವ 20 ಲಕ್ಷ ರೂಪಾಯಿ ಪಾರ್ಟಿ ಫಂಡ್ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಹಣ ಹಾಗೂ ಕಾರನ್ನು ವಶಪಡಿಸಿಕೊಂಡಿರುವ ಕ್ರಮಕ್ಕೆ ಅಸಮಾಧಾನ ಸೂಚಿಸಿರುವ ಅವರು, ಪಕ್ಷದ ಅಭ್ಯರ್ಥಿಗಳ ಹಣವನ್ನು ಹಿಂತಿರುಗಿಸುವಂತೆ ಆಗ್ರಹಿಸಿದ್ದಾರೆ.

ಚುನಾವಣಾ ಆಯೋಗ ನೀತಿಯನ್ವಯ ಪ್ರತಿಕ್ಷೇತ್ರದಲ್ಲಿ 10 ಲಕ್ಷ ರೂಪಾಯಿಗಳನ್ನು ವಿನಿಯೋಗಿಸುವ ಅವಕಾಶವಿದ್ದು, ಅದರಂತೆ ಹುಕ್ಕೇರಿ ಹಾಗೂ ಅರೆಬಾವಿ ಕ್ಷೇತ್ರದ ಅಭ್ಯರ್ಥಿಗಳಿಗೆ ತಲಾ 10 ಲಕ್ಷ ರೂಪಾಯಿಯನ್ನು ಪಕ್ಷದ ಲೆಟರ್‌ಹೆಡ್ ಜತೆ ಕಳುಹಿಸಲಾಗಿತ್ತು ಎಂದು ಹೇಳಿರುವ ಗೌಡರು ಇದನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ, ಕೂಡಲೇ ಮರಳಿಸಬೇಕು ಎಂದು ಒತ್ತಾಯಿಸಿದ್ದಾರೆ.

10 ಲಕ್ಷಕ್ಕಿಂತ 1 ರೂ ಹೆಚ್ಚಿಗೆಯಿದ್ದರೂ ತಾವು ಶಿಕ್ಷೆ ಅನುಭವಿಸಲು ಸಿದ್ಧ ಎಂದು ಗೌಡರು ವಿವರಿಸಿದರು.

ಕೇಂದ್ರ ಆಯುಕ್ತರಿಗೆ ಪತ್ರ
ರಾಜ್ಯ ಸರ್ಕಾರ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ಸಂಪೂಣ ದುರುಪಯೋಗಪಡಿಸಿಕೊಳ್ಳುತ್ತಿದೆ. ಡಿಸ್ಟಿಲರಿಗಳಿಂದಲೇ ಮಿತಿಯಿಲ್ಲದೇ ಮದ್ಯ ಸರಬರಾಜಾಗುತ್ತಿದೆ. ಈಶ್ವರಪ್ಪ ಅವರ ಸಂಬಂಧಿಯನ್ನು ಬದಲಿಸುವಂತೆ ಕೇಳಿಕೊಂಡಿದ್ದರೂ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಇದೆಲ್ಲದರ ಕುರಿತು ಖುದ್ದು ಭೇಟಿ ನೀಡಿ ಪರೀಶೀಲಿಸಬೇಕೆಂದು ಕೇಂದ್ರ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡುವುದಾಗಿ ತಿಳಿಸಿದರು.

ಘಟನೆಯ ಹಿನ್ನೆಲೆ:
ಬೆಳಗಾವಿ ಸಮೀಪ ಮತದಾರರಿಗೆ ಹಂಚಲು ಸಾಗಿಸಲಾಗುತ್ತಿತ್ತು ಎನ್ನಲಾದ 20 ಲಕ್ಷ ನಗದು ಹಣ ಮತ್ತು ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಖಚಿತ ಮಾಹಿತಿ ಮೇರೆಗೆ ಸೋಮವಾರ ಮುಂಜಾನೆ ಮಾಳಖೇಡ ಬಳಿ ಪೊಲೀಸರು ದಾಳಿ ನಡೆಸಿದ್ದು, ಹಣಜ ಜತೆ ನಾಲ್ವರನ್ನು ಬಂಧಿಸಿದ್ದರು.

ಬಂಧಿತರಲ್ಲಿ ಹುಕ್ಕೇರಿಯ ಜೆಡಿಎಸ್ ಅಭ್ಯರ್ಥಿಯ ಸಹೋದರ ಕೂಡ ಸೇರಿದ್ದು, ಸ್ಕಾರ್ಪಿಯೋ ಮತ್ತು ಹಣ ಎಪಿಎಂಸಿ ಪೊಲೀಸರ ವಶದಲ್ಲಿದೆ. ಹುಕ್ಕೇರಿ ಮತ್ತು ಅರಬಾವಿ ಕ್ಷೇತ್ರಗಳಲ್ಲಿ ಮತದಾರರಿಗೆ ಹಂಚುಲು ಈ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಬಿಳಿ ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮಾಹಿತಿ ನೀಡಿದ್ದರಿಂದ ಬಂಧಿಸಲು ಸಾಧ್ಯವಾಗಿದೆ. ವಿಚಾರಣೆ ಇನ್ನೂ ನಡೆಯುತ್ತಿದೆ ಎಂದು ಸೋನಿಯಾ ತಿಳಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೊಡ್ಡಬಳ್ಳಾಪುರ ಚುನಾವಣಾಧಿಕಾರಿ ಬದಲು
ಬೆಂಗಳೂರಿನಲ್ಲಿ ಮತ್ತೆ ಬೀದಿ ನಾಯಿ ಕಾಟ
ಪಕ್ಷಾಂತರ ಕಾಯ್ದೆ ತಿದ್ದುಪಡಿಗೆ ಗೌಡರ ಒತ್ತಾಯ
ಬಿಜೆಪಿಗೆ ಸಿದ್ದು ಬೆಂಬಲ: ಹೊರಟ್ಟಿ ಆರೋಪ
ಟೀಕಾಕಾರರಿಗೆ ಮತದಾರನಿಂದ ಪಾಠ: ಅನಿತಾ ಕುಮಾರಸ್ವಾಮಿ
ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಿಮೂ ಹೆಸರು ಶಿಫಾರಸು