ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಒಕ್ಕುಂದ, ಜಿ.ಎನ್‌.ಮೋಹನ್‌ಗೆ ಪುತಿನ ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಕ್ಕುಂದ, ಜಿ.ಎನ್‌.ಮೋಹನ್‌ಗೆ ಪುತಿನ ಪ್ರಶಸ್ತಿ
ಕನ್ನಡದಲ್ಲಿ ಪ್ರಕಟವಾಗುವ ಶ್ರೇಷ್ಠ ಕವನ ಸಂಕಲನ ಅಥವಾ ನಾಟಕಗಳಿಗೆ ಡಾ.ಪುತಿನ ಟ್ರಸ್ಟ್ ಪ್ರತಿ ವರ್ಷ ಕೊಡಮಾಡುವ 'ಪುತಿನ ಕಾವ್ಯಪುರಸ್ಕಾರ'ಕ್ಕೆ ಈ ಬಾರಿ ಜಿ.ಎನ್.ಮೋಹನ್ ಅವರ 'ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ' ಹಾಗೂ ಬಸವರಾಜ ಒಕ್ಕುಂದ ಅವರ 'ಒಡೆಯಲಾರದ ಪ್ರತಿಮೆ' ಕೃತಿಗಳು ಆಯ್ಕೆಯಾಗಿವೆ.

ಡಾ.ಪುತಿನ ಟ್ರಸ್ಟ್ 1997ರಿಂದ ಪ್ರತಿವರ್ಷ ಈ ಪುರಸ್ಕಾರವನ್ನು ನೀಡುತ್ತಾ ಬಂದಿದೆ. ಜನವರಿಯಲ್ಲಿ ಪ್ರಶಸ್ತಿ ಪುರಸ್ಕಾರ ಸಮಾರಂಭ ನಡೆಯಲಿದೆ. ಪ್ರಶಸ್ತಿ 25,000 ರೂ.ನಗದು ಹಾಗೂ ಫಲಕ ಒಳಗೊಂಡಿದೆ. ನಗದು ಹಣವನ್ನು ಇಬ್ಬರು ಕೃತಿಕಾರರಿಗೆ ಸಮನಾಗಿ ಹಂಚಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಡಾ.ಜಿ.ಎಸ್.ಶಿವರುದ್ರಪ್ಪ ತಿಳಿಸಿದ್ದಾರೆ.

ಪತ್ರಕರ್ತರಾಗಿರುವ ಜಿ.ಎನ್.ಮೋಹನ್ ಅವರು ಎರಡು ಕವನ ಸಂಕಲನ, ಒಂದು ಪ್ರವಾಸ ಕಥನ ಸೇರಿದಂತೆ ಒಟ್ಟು ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಪುತಿನ ಕಾವ್ಯಪುರಸ್ಕಾರಕ್ಕೆ ಆಯ್ಕೆಯಾಗಿರುವ 'ಪ್ರಶ್ನೆಗಳಿರುವುದು ಷೇಕ್ಸ್‌ಪಿಯರನಿಗೆ' ಅವರ ಎರಡನೆಯ ಕವನ ಸಂಕಲನ. 'ಸೋನೆ ಮಳೆಯ ಸಂಜೆ' ಮೊದಲನೆಯದು. 'ನನ್ನೊಳಗಿನ ಹಾಡು ಕ್ಯೂಬಾ' ಎಂಬ ಪ್ರವಾಸ ಕಥನ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಗಿದೆ.

ಬೆಳಗಾವಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ ಒಕ್ಕುಂದ ಒಟ್ಟು ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಕ್ಟರೇಟ್ ಜವಾಬ್ದಾರಿ ಹೆಚ್ಚಿಸಿದೆ: ಯಡಿಯೂರಪ್ಪ
ಅಧಿಕಾರಿಗಳಿಗೆ ಯಡಿಯೂರಪ್ಪ ತರಾಟೆ
ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ
ದೇವೇಗೌಡರ ಮದ್ಯ ಆರೋಪ ನಿರಾಕರಿಸಿದ ಕಟ್ಟಾ
20 ಲಕ್ಷ ಅಭ್ಯರ್ಥಿಗಳಿಗೆ ಕಳುಹಿಸಿದ ಹಣ: ಗೌಡ
ದೊಡ್ಡಬಳ್ಳಾಪುರ ಚುನಾವಣಾಧಿಕಾರಿ ಬದಲು