ಇಲ್ಲಿನ ಉಪಚುನಾವಣೆಯಲ್ಲಿ ಆಟೋ ಚಾಲಕರೊಬ್ಬರು ಕೋಟ್ಯಾಧಿಪತಿ ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿದಿದ್ದಾರೆ. 76,000 ರೂ. ಆಸ್ತಿ. 40,000 ರೂ.ಸಾಲ ಇರುವ ಎಲಿಷಾ ಗುರುವಯ್ಯ ಎಲಕಪತಿ ಪ್ರಮುಖ ಪಕ್ಷಗಳ ಘಟಾನುಘಟಿಗಳ ಹಾಗೂ ಇನ್ನೋರ್ವ ಲಕ್ಷಾಧಿಪತಿ ಪಕ್ಷೇತರ ಅಭ್ಯಥಿಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಸಮಾಜದ ಏರು ಪೇರುಗಳನ್ನು ಕಂಡು ರೋಸಿಹೋಗಿರುವ ಎಲಿಷಾಗೆ ದಲಿತರು ಮತ್ತು ಬಡವರ ಏಳಿಗೆಗಾಗಿ ದುಡಿಯುವ ಆಸೆ. ದಲಿತರಿಗೆ ಆದ ಅನ್ಯಾಯಗಳ ಬಗ್ಗೆ ಜಗಳವಾಡುವುದರಿಂದ ಪ್ರಯೋಜನವಿಲ್ಲ ಎನ್ನುವ ಇವರು, ಇತರ ಜಾತಿಗಳೊಂದಿಗೆ ಸೇರಿ ಬದುಕಬೇಕಾಗಿದೆ ಎನ್ನುತ್ತಾರೆ.
ಕೇಂದ್ರ ಸರ್ಕಾರ ಆದೇಶ ನೀಡಿದ್ದರೂ, ರಾಜ್ಯ ಸರ್ಕಾರ ಅರಣ್ಯ ಒತ್ತವರಿ ತಡೆಯಲು ಸಾಧ್ಯವಾಗಿಲ್ಲ ಎನ್ನುವ ಇವರು, ಕಳೆದ ಆರು ದಶಕಗಳಿಂದ ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ದಲಿತರ ಶೋಷಣೆ ಮಾಡಿದೆ. ದಲಿತರ ಪರವಾಗಿ ನಾನು ಮಾಡಿರುವ ಕೆಲಸಗಳ ಬಗ್ಗೆ ಮತದಾರರಿಗೆ ಅರಿವಿದೆ. ನನ್ನ ಪರವಾಗಿ ಡಿಆರ್‌ವಿ ಮತ ಪ್ರಚಾರ ನಡೆಸಲಿದೆ. ನಾನು ಮೇಲ್ವರ್ಗದ ವಿರೋಧಿ ಅಲ್ಲ. ಆದ್ದರಿಂದ ಮೇಲ್ವರ್ಗದವರ ಮತ ಲಭಿಸುವ ಭರವಸೆ ತಮ್ಮದೆಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಎಲಿಷಾ. |