ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಪುತ್ರಿ ಶಾಂಭವಿಯನ್ನು ಕಣಕ್ಕಿಳಿಸಲಿರುವ ಎಸ್ಸೆಂಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುತ್ರಿ ಶಾಂಭವಿಯನ್ನು ಕಣಕ್ಕಿಳಿಸಲಿರುವ ಎಸ್ಸೆಂಕೆ
PTI
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರಿ ಶಾಂಭವಿಯನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಒಲವು ತೋರಿದ್ದಾರೆ.

ತಮ್ಮ ಪುತ್ರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ 'ಹೌದೆಂದು' ತಲೆಯಾಡಿಸುವ ಮೂಲಕ ಆ ಕುರಿತು ಸಕಾರಾತ್ಮಕ ಸೂಚನೆ ನೀಡಿದ್ದಾರೆ. ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡ ಮಾಜಿ ಮುಖ್ಯಮಂತ್ರಿ, ಜನ ಸೇವೆಯಲ್ಲಿ ತೊಡಗಿಸಿಕೊಳ್ಳಲು ತಮ್ಮ ಉತ್ತರಾಧಿಕಾರಿಯಾಗುವುದಕ್ಕೆ ನಮ್ಮ ಕುಟುಂಬದ ಸದಸ್ಯರು ಅರ್ಹರಾಗಿದ್ದಾರೆ. ಕಾಲಾನುಕಾಲದಿಂದ ನಮ್ಮ ಕುಟುಂಬದವರು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸೂಕ್ತ ಸಮಯದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಕೈಗೊಳ್ಳುತ್ತಾರೆ ಎಂದ ಕೃಷ್ಣ, ಚುನಾವಣಾ ಪ್ರಚಾರ ಮಾಡಲು ಮಾಡಲು ಸಿದ್ದು ನಿರಾಕರಿಸಿದ್ದಾರೆ ಎಂಬುದನ್ನು ಅಲ್ಲಗಳೆದರು. ಮದ್ದೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮ ಸಹೋದರನ ಮಗ ಎಸ್.ಗುರುಚರಣ್ ಪರ ಡಿ.21 ರಿಂದ ಪ್ರಚಾರ ನಡೆಸುವುದಾಗಿ ಕೃಷ್ಣ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾರವಾರ: ಕೋಟ್ಯಾಧಿಪತಿಗಳೆದುರು ಆಟೋವಾಲಾ ಸ್ಪರ್ಧೆ
ಒಕ್ಕುಂದ, ಜಿ.ಎನ್‌.ಮೋಹನ್‌ಗೆ ಪುತಿನ ಪ್ರಶಸ್ತಿ
ಡಾಕ್ಟರೇಟ್ ಜವಾಬ್ದಾರಿ ಹೆಚ್ಚಿಸಿದೆ: ಯಡಿಯೂರಪ್ಪ
ಅಧಿಕಾರಿಗಳಿಗೆ ಯಡಿಯೂರಪ್ಪ ತರಾಟೆ
ಬೆಳಗಾವಿಯಲ್ಲಿ ವಿಧಾನ ಮಂಡಲ ಅಧಿವೇಶನ
ದೇವೇಗೌಡರ ಮದ್ಯ ಆರೋಪ ನಿರಾಕರಿಸಿದ ಕಟ್ಟಾ