ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಹೊಸವರ್ಷ: ತಡರಾತ್ರಿವರೆಗೆ ಕುಡಿದು ಕುಪ್ಪಳಿಸಬಹುದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸವರ್ಷ: ತಡರಾತ್ರಿವರೆಗೆ ಕುಡಿದು ಕುಪ್ಪಳಿಸಬಹುದು
ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಈಗಾಗಲೇ ಪ್ಲಾನ್ ಹಾಕುತ್ತಿರುವವರಿಗೆ ಇಲ್ಲೊಂದು ಸಂತಸದ ಸುದ್ದಿ ಇದೆ. ಉಗ್ರರ ದಾಳಿ ಮತ್ತು ಇತರ ಭದ್ರತೆ ಕಾರಣಗಳಿಗಾಗಿ ಸಂಭ್ರಮದ ಆಚರಣೆಗೆ ಕತ್ತರಿ ಹಾಕದಿರಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಆಚರಣೆಗೆ ಈ ಬಾರಿ ಡಿಸೆಂಬರ್ 31 ರ ರಾತ್ರಿ 1 ಗಂಟೆವರೆಗೂ ಅವಕಾಶವಿದೆ ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಳೆದ ವರ್ಷ ಜಾರಿಯಲ್ಲಿದ್ದ ನಿಯಮಗಳನ್ನೇ ಈ ಬಾರಿಯೂ ಜಾರಿಗೊಳಿಸಲಾಗುವುದು. ಈ ನಿಯಮದಂತೆ ಡಿ. 31 ರ ರಾತ್ರಿ 12.30 ರವರೆಗೆ ನರ್ತಿಸಲು ಮದ್ಯ ಸೇವಿಸಲು ಅವಕಾಶ ನೀಡಲಾಗುವುದು. 12.30ಕ್ಕೆ ಪೊಲೀಸರು ಎಚ್ಚರಿಸುತ್ತಾರೆ. ಉಳಿದ 30 ನಿಮಿಷ ಅವಧಿಯಲ್ಲಿ ಜನರು ತಮ್ಮ ತಮ್ಮ ಮನೆಗಳಿಗೆ ತೆರಳಲು ಅವಕಾಶ ನೀಡಲಾಗಿದೆ ಎಂದು ಬಿದರಿ ಹೇಳಿದ್ದಾರೆ.

ಹೊಸ ವರ್ಷದ ದಿನ ಹೊಟೇಲ್, ಕ್ಲಬ್‌ಗಳಲ್ಲೂ ನರ್ತಿಸಲು ಅವಕಾಶ ನೀಡಲಾಗಿದೆ. ಹೊಸ ವರ್ಷದ ಆಚರಣೆಗಾಗಿ ಹೊಟೇಲ್, ಕ್ಲಬ್ ಮಾಲೀಕರು ಅಬಕಾರಿ ಇಲಾಖೆಯಿಂದ ವಿಶೇಷ ಅನುಮತಿ ಪಡೆದುಕೊಳ್ಳಬೇಕು. ಬಯಲು ಪ್ರದೇಶದಲ್ಲಿ ಹೊಸ ವರ್ಷಾಚರಣೆಗೆ ಅನುಮತಿ ಇಲ್ಲ. ಎಂಜಿ ರಸ್ತೆಯಲ್ಲಿ ಗುಂಪು ಸೇರುವ ಯುವಕ ಯುವತಿಯರಿಗೆ ಈ ವರ್ಷವೂ ಅಡ್ಡಿಪಡಿಸುವುದಿಲ್ಲ ಎಂದು ಬಿದರಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಂಗೇರುತ್ತಿರುವ ಉಪಚುನಾವಣಾ ಪ್ರಚಾರ
ಪ್ರಚಾರಕ್ಕಿಳಿಯದ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದು
ಕನ್ನಡಿಗರಿಗೆ ಅನ್ಯಾಯ: ಎಸ್ಬಿಐ ವಿರುದ್ಧ ಕರವೇ ಪ್ರತಿಭಟನೆ
ಅಕ್ಷಯಪಾತ್ರೆ ಯೋಜನೆಗೆ ಒಬಾಮ ಪ್ರಶಂಸೆ
ರಾಜ್ಯದಲ್ಲಿರುವ ವಿದೇಶಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ
ಪುತ್ರಿ ಶಾಂಭವಿಯನ್ನು ಕಣಕ್ಕಿಳಿಸಲಿರುವ ಎಸ್ಸೆಂಕೆ