ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಸಿದ್ದುಗಾಗಿ ಜೆಡಿಎಸ್ ನಂಟು ಬಿಟ್ಟೆವು: ಡಿ.ಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿದ್ದುಗಾಗಿ ಜೆಡಿಎಸ್ ನಂಟು ಬಿಟ್ಟೆವು: ಡಿ.ಕೆ
NRB
ಜೆಡಿಎಸ್- ಕಾಂಗ್ರೆಸ್ ನಡುವಿನ ಮೈತ್ರಿ ಮುರಿದು ಬೀಳಲು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ನಿಲುವೇ ಕಾರಣ ಎಂಬುದು ಈಗ ಬಹಿರಂಗಗೊಂಡಿದೆ.

ಈ ಕುರಿತು ಮಾಹಿತಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಜುಗರವಾಗಬಾರದೆಂಬ ಕಾರಣದಿಂದ ಜೆಡಿಎಸ್ ಜತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

ಮರುಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಬೇಕೆಂದು ಪಕ್ಷದೊಳಗೆ ಬಹಳ ಒತ್ತಡವಿತ್ತು. ಆದರೆ ಸಿದ್ದರಾಮಯ್ಯನವರ ಮೇಲಿನ ವಿಶ್ವಾಸದಿಂದ ನಿರ್ಣಯವನ್ನು ಬದಲಿಸಬೇಕಾಯಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿದ್ದರಾಮಯ್ಯನವರ ಚುನಾವಣಾ ಪ್ರಚಾರದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಹ್ವಾನ ಬರಲಿ ಎಂದು ಸಿದ್ದರಾಮಯ್ಯ ನೀರೀಕ್ಷಿಸಿರಬಹುದು. ಆದರೆ ಈಗಾಗಲೇ ಕೆಪಿಸಿಸಿ ಪ್ರಚಾರ ನಡೆಸುವಂತೆ ಆಹ್ವಾನ ನೀಡಿದೆ. ಈ ನಿಟ್ಟಿನಲ್ಲಿ ಅವರು ಪಕ್ಷದ ಪ್ರಚಾರ ನಡೆಸಲು ಬರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, ರಾಜ್ಯದಲ್ಲಿ ಸ್ಥಿರ ಸರ್ಕಾರದ ರಚನೆಗಾಗಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಬೇರು ಗಟ್ಟಿಯಾಗಿಲ್ಲದಿರುವಾಗ ಬಿಜೆಪಿಯಿಂದ ಸ್ಥಿರ ಸರ್ಕಾರ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶುಭಲತಾ ಅಸ್ನೋಟಿಕರ್‌ಗೆ ಕೆಪಿಸಿಸಿ ನೋಟೀಸ್
ಹೊಸವರ್ಷ: ತಡರಾತ್ರಿವರೆಗೆ ಕುಡಿದು ಕುಪ್ಪಳಿಸಬಹುದು
ರಂಗೇರುತ್ತಿರುವ ಉಪಚುನಾವಣಾ ಪ್ರಚಾರ
ಪ್ರಚಾರಕ್ಕಿಳಿಯದ ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದು
ಕನ್ನಡಿಗರಿಗೆ ಅನ್ಯಾಯ: ಎಸ್ಬಿಐ ವಿರುದ್ಧ ಕರವೇ ಪ್ರತಿಭಟನೆ
ಅಕ್ಷಯಪಾತ್ರೆ ಯೋಜನೆಗೆ ಒಬಾಮ ಪ್ರಶಂಸೆ