ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಮದ್ದೂರು ಪ್ರಚಾರಕ್ಕೆ ನಟಿ ರಮ್ಯಾ ರಂಗು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮದ್ದೂರು ಪ್ರಚಾರಕ್ಕೆ ನಟಿ ರಮ್ಯಾ ರಂಗು?
MOKSHENDRA
ಮದ್ದೂರು ಉಪಚುನಾವಣೆಗೆ ತಾರಾ ರಂಗು ಬರಲಿದೆಯೇ? ಪ್ರಚಾರದಿಂದ ದೂರ ಉಳಿದಿರುವ ಅಂಬರೀಷ್ ಅವರ ಸ್ಥಾನ ತುಂಬುವಲ್ಲಿ ಕನ್ನಡದ ನಾಯಕಿ ನಟಿ ರಮ್ಯಾ ಪ್ರಚಾರಕ್ಕೆ ಬರುವರೇ? ಇಂತಹ ಪ್ರಶ್ನೆಗಳು ಯಾಕೆ ಬಂದವು ಎಂಬ ಪ್ರಶ್ನೆಗೆ ಉತ್ತರ, ರಮ್ಯಾ ತಾಯಿ ರಂಜಿತಾ ಈಗಾಗಲೇ ಕಾಂಗ್ರೆಸ್ ಪರ ಪ್ರಚಾರದಲ್ಲಿ ಸದ್ದಿಲ್ಲದೇ ನಿರತರಾಗಿರುವುದು.

ರಂಜಿತಾ ಅವರು ಮೂಲತಃ ಮಂಡ್ಯದ ಕಾಳಿಕಾಂಬಾ ಬೀದಿಯ ಬೋರಯ್ಯನವರ ಪುತ್ರಿ. ತಮ್ಮ ಕುಟುಂಬದ ಬಗ್ಗೆ ಮಾತನಾಡಿದ ಅವರು, "ಮೊದಲಿನಿಂದಲೂ ನಮ್ಮ ಕುಟುಂಬ ಕಾಂಗ್ರೆಸ್ನೊಂದಿಗೆ ಒಡನಾಟ ಹೊಂದಿದೆ. ಹಾಗಾಗಿಯೇ ನಾನು ಪ್ರಚಾರಕ್ಕೆ ಬಂದಿದ್ದು, ಸ್ಟಾರ್ ವ್ಯಾಲ್ಯೂ ತಂದುಕೊಡುವುದಕ್ಕಿಂತ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕೆಂಬುದು ನನ್ನ ನಿಲುವು. ಪಕ್ಷ ನನ್ನ ಗುರುತಿಸುವಂತೆ ಪಕ್ಷದ ಪರ ಕೆಲಸ ಮಾಡುವುದು ಸೂಕ್ತ" ಎನ್ನುತ್ತಾರೆ.

ಎಸ್.ಎಂ.ಕೃಷ್ಣ ಅವರು ಮೊದಲಿನಿಂದಲೂ ನಮಗೆ ರಾಜಕೀಯ ಮಾರ್ಗದರ್ಶಕರು ಹಾಗಾಗಿ ಮದ್ದೂರಿಗೆ ಪ್ರಚಾರಕ್ಕೆ ಆಗಮಿಸಿದ್ದೇನೆ ಎನ್ನುವ ಅವರು ರಮ್ಯಾ ಪ್ರಚಾರಕ್ಕೆ ಬರ್ತಾರಾ? ಎಂಬ ಪ್ರಶ್ನೆಗೆ "ಅವಳು ಬರುವ ಆಸಕ್ತಿ ತೋರಿಸಿದ್ದಾಳೆ" ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿದ್ದುಗೆ ಬಿಜೆಪಿಯ ಹಾರ್ದಿಕ ಸ್ವಾಗತವಿದೆ: ಶ್ರೀರಾಮುಲು
ಅತೃಪ್ತ ಕಾಂಗ್ರೆಸಿಗರ ಬೆಂಬಲಿವಿದೆ: ಸದಾನಂದಗೌಡ
ರಾಜ್ಯ ರಸ್ತೆ ಸಾರಿಗೆ ಬಸ್‌ ದರದಲ್ಲಿ ಇಳಿಕೆ?
ಪೊಲೀಸ್‌ ವ್ಯವಸ್ಥೆಗೆ ಬಲತುಂಬಬೇಕಿದೆ: ಶ್ರೀಕುಮಾರ್
ಗಣಿರೆಡ್ಡಿ ಸಹೋದರರ ವಜಾಗೆ ಆಗ್ರಹ
ಯುಪಿಎ ಜಾಹೀರಾತು ವಿರುದ್ಧ ಚು.ಆಯೋಗಕ್ಕೆ ದೂರು