ಚೋಳರ ಕಾಲದ ವಿಗ್ರಹವನ್ನು ಹೊಂದಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಉನ್ನತ ಪೊಲೀಸಧಿಕಾರಿಯೊಬ್ಬರು ಹೇಳಿದ್ದಾರೆ.
ಸುಮಾರು 30 ಕೆ.ಜಿ ತೂಗುವ ಪಾರ್ವತಿ ದೇವಿಯ ಪಂಚಲೋಹ ವಿಗ್ರಹವನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಎರಡು ಕೋಟಿ ರೂಪಾಯಿ ಬೆಲೆಬಾಳುತ್ತದೆ ಎಂದು ಪೊಲೀಸ್ ಆಯುಕ್ತ ಶಂಕರ್ ಬಿದರಿ ಹೇಳಿದ್ದಾರೆ.
ಮೈಸೂರು ಮೂಲದ ಪುರಾತತ್ವ ತಜ್ಞರು ಈ ಮೂರ್ತಿಯನ್ನು ಪರೀಕ್ಷಿಸಿದ್ದು ಇದು ಚೋಳರ ಕಾಲ ಮೂರ್ತಿ ಎಂದು ಹೇಳಿದ್ದಾರೆ.
ತಮಿಳ್ನಾಡಿನಿಂದ ಕದ್ದಿರುವ ಈ ಮೂರ್ತಿಯನ್ನು ಮೈಸೂರಿಗೆ ಸಾಗಿಸಿದ್ದು ಮಾರಾಟಕ್ಕಾಗಿ ಬೆಂಗಳೂರಿಗೆ ಒಯ್ಯಲಾಗಿದೆ ಎಂದು ಶಂಕರ ಬಿದರಿ ಹೇಳಿದ್ದಾರೆ. |