ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ: ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ: ರೆಡ್ಡಿ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ನಿರ್ಮಿಸಲು 35 ಎಕರೆ ಭೂಮಿಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರಕ್ಕೆ ಅಂಗೀಕಾರ ದೊರೆತಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮೂಲಸೌಲಭ್ಯ ಇಲಾಖೆಗೆ ಸೇರಿದ 400 ಎಕರೆ ಹೆಚ್ಚುವರಿ ಭೂಮಿಯ ಪೈಕಿ 35 ಎಕರೆ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ನೀಡಿ, ಈ ಸಮಾವೇಶ ಕೇಂದ್ರದ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಸಂಪೂರ್ಣ ಖಾಸಗಿಯವರೇ ಬಂಡವಾಳ ಹೂಡಿ ಈ ಸಮಾವೇಶ ಕೇಂದ್ರ ನಿರ್ಮಿಸುತ್ತಿದ್ದು, ಸರ್ಕಾರ 35 ಎಕರೆ ಜಮೀನನ್ನು 30 ವರ್ಷದ ಗುತ್ತಿಗೆ ಮೇಲೆ ಸೋಮು ನಿರ್ಮಾಣ ಸಂಸ್ಥೆಗೆ ನೀಡಲಾಗುವುದು. ಈ ಸಮಾವೇಶ ಕೇಂದ್ರವನ್ನು ಅಮೆರಿಕಾ ನ್ಯೂಯಾರ್ಕ್ ನಗರದ ಸಮಾವೇಶ ಕೇಂದ್ರದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದ್ದು, ಪಂಚತಾರಾ ಹೋಟೆಲ್‌ಗಳು, ವಿಶಾಲ ಸಭಾಂಗಣ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಹೊಂದಿರುತ್ತದೆ ಎಂದು ವಿವರಿಸಿದರು.

ಸಮಾವೇಶ ಕೇಂದ್ರ ನಿರ್ಮಾಣದ ಗುತ್ತಿಗೆ ಪಡೆದಿರುವ ಕಂಪನಿ ಪ್ರವಾಸೋದ್ಯಮ ಇಲಾಖೆಗೆ ಆರಂಭಿಕ 20 ಕೋಟಿ ರೂಗಳ ಠೇವಣಿ ಇಡಲಿದ್ದು, ನಂತರ ವಾರ್ಷಿಕ 1 ಕೋಟಿ 15 ಲಕ್ಷದ 90 ಸಾವಿರ ಗುತ್ತಿಗೆ ಹಣ ಪಾವತಿಸಬೇಕು. ಅಲ್ಲದೇ ಬರುವ ಆದಾಯದಲ್ಲಿ ಶೇ.3ರಷ್ಟನ್ನು ಇಲಾಖೆಗೆ ನೀಡಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದ್ದು, ಪ್ರತಿವರ್ಷ ಗುತ್ತಿಗೆ ಹಣದ ಮೊತ್ತವನ್ನು ಶೇ. 10ರಷ್ಟು ಹೆಚ್ಚಿಸಲಾಗುವುದು ಎಂದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ವರದಿ ಸಲ್ಲಿಕೆ
ಚೋಳರ ಕಾಲದ ವಿಗ್ರಹ ಕಳ್ಳರ ಬಂಧನ
ಮಾಜಿ ಸಚಿವ ಎಚ್.ಎನ್.ನಂಜೇಗೌಡ ಇನ್ನಿಲ್ಲ
ಮದ್ದೂರು ಪ್ರಚಾರಕ್ಕೆ ನಟಿ ರಮ್ಯಾ ರಂಗು?
ಸಿದ್ದುಗೆ ಬಿಜೆಪಿಯ ಹಾರ್ದಿಕ ಸ್ವಾಗತವಿದೆ: ಶ್ರೀರಾಮುಲು
ಅತೃಪ್ತ ಕಾಂಗ್ರೆಸಿಗರ ಬೆಂಬಲಿವಿದೆ: ಸದಾನಂದಗೌಡ