ರಾಜ್ಯ ಚುನಾವಣಾ ಆಯೋಗ ಹಿಂದೆ ಕರೆಸಿಕೊಂಡಿದ್ದ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಧಿಕಾರಿಯಾಗಿದ್ದ ಶಿವಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ವಿಜಯ ಕುಮಾರ್ ಅವರನ್ನು ನೇಮಿಸಲಾಗಿದೆ.
ಶಿವಪ್ರಸಾದ್ ಸಚಿವ ಈಶ್ವರಪ್ಪ ಅವರ ಅಳಿಯನಾಗಿದ್ದು, ಅವರು ಚುನಾವಣೆಯಲ್ಲಿ ನ್ಯಾಯಸಮ್ಮತ ರೀತಿಯಲ್ಲಿ ವರ್ತಿಸುವುದು ಅನುಮಾನವೆಂದು ವಿರೋಧ ಪಕ್ಷಗಳು ದೂರಿದ್ದವು.
ದೂರನ್ನು ರಾಜ್ಯ ಚುನವಣಾ ಮುಖ್ಯ ಆಯುಕ್ತ ಎಂ.ಎನ್. ವಿದ್ಯಾಶಂಕರ್ ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಿದ್ದರು. ಕೇಂದ್ರ ಚುನಾವಣಾ ಆಯೋಗವು ಕಾಂಗ್ರೆಸ್ ನೀಡಿದ ದೂರನ್ನು ಪರಿಗಣಿಸಿದ್ದು, ಶಿವಪ್ರಸಾದ್ ಅವರ ಬದಲಿಗೆ ಬೇರೆ ಅಧಿಕಾರಿಯನ್ನು ನಿಯೋಜಿಸುವಂತೆ ಸೂಚನೆ ನೀಡಿತ್ತು. |