ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಜ. 16ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ. 16ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ
ಜನವರಿ 16ರಿಂದ 10 ದಿನಗಳ ಕಾಲ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಸಚಿವಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ಬೆಳಗಾವಿಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಚಾಲನೆ ದೊರೆಯಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಸಂಪುಟ ಸಭೆ ನಂತರ ಮಾತನಾಡಿದ ಅವರು, ಅಧಿವೇಶನ ನಡೆಸುವ ಸಂಬಂಧ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮತ್ತು ಭಾಗ್ಯಲಕ್ಷ್ಮೀ ಯೋಜನೆಗೆ ನೇರವಾಗಿ ಭಾರತೀಯ ಜೀವ ವಿಮಾ ನಿಗಮದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಭಾಗ್ಯಲಕ್ಷ್ಮಿಗೆ ಉತ್ತೇಜನ
ಮೊದಲ ಹೆಣ್ಣುಮಗುವಿಗೆ ಸರ್ಕಾರ 19,300 ರೂ. ಎರಡನೇ ಹೆಣ್ಣು ಮಗುವಿಗೆ 191 ರೂಗಳನ್ನು ಪಾವಲಿಸಲಿದೆ. ಮಗುವಿಗೆ 18 ವರ್ಷ ತುಂಬಿದ ನಂತರ 1 ಲಕ್ಷ ರೂ ದೊರೆಯಲಿದೆ. 15 ವರ್ಷ ತುಂಬಿದ ನಂತರ 50 ಸಾವಿರ ರೂ. ಸಾಲ ಪಡೆಯಲು ಅವಕಾಶವಿದೆ. ಅಲ್ಲದೆ ಮಗುವಿನ ತಂದೆ-ತಾಯಿಗೆ 75 ಸಾವಿರ ರೂ. ಜೀವವಿಮೆ ಸೌಲಭ್ಯವಿದೆ ಎಂದರು.

ಪ್ರಸಕ್ತ ಯೋಜನೆಯಡಿ 19 ಸಾವಿರ ಮಕ್ಕಳಿಗೆ ಭಾಗ್ಯಲಕ್ಷಿ ಬಾಂಡ್ ವಿತರಿಸಲಾಗಿದ್ದು, ಸರ್ಕಾರಿ ಪ್ರೌಢಶಾಲೆಯಲ್ಲಿ ಖಾಲಿ ಇರುವ 2500 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನಾಲ್ಕು ಸಾವಿರ ಗೌರವಧನದ ಆಧಾರದ ಮೇಲೆ ನೇಮಕಮಾಡಿಕೊಳ್ಳಲು ಸಂಪುಟ ಅನುಮೋದನೆ ನೀಡಿದೆ ಎಂದು ಸಚಿವೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣಾಧಿಕಾರಿಯಾಗಿದ್ದ ಶಿವಪ್ರಸಾದ್ ವರ್ಗಾವಣೆ
ಭೂಗಳ್ಳರ ಮೇಲೆ ಕ್ರಮಕ್ಕೆ ರಾಮಸ್ವಾಮಿ ಆಗ್ರಹ
ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ: ರೆಡ್ಡಿ
ಅಕ್ರಮ ಗಣಿಗಾರಿಕೆ: ಸರ್ಕಾರಕ್ಕೆ ವರದಿ ಸಲ್ಲಿಕೆ
ಚೋಳರ ಕಾಲದ ವಿಗ್ರಹ ಕಳ್ಳರ ಬಂಧನ
ಮಾಜಿ ಸಚಿವ ಎಚ್.ಎನ್.ನಂಜೇಗೌಡ ಇನ್ನಿಲ್ಲ