ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ನೈಸ್ ಫೀಸು: ದುಬಾರಿ ಎಂಬುದೆಲ್ಲರ ಅಭಿಪ್ರಾಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೈಸ್ ಫೀಸು: ದುಬಾರಿ ಎಂಬುದೆಲ್ಲರ ಅಭಿಪ್ರಾಯ
"ನೈಸ್ ರಸ್ತೆ ಪ್ರಕರಣ ಸುಪ್ರೀಂ ಕೋರ್ಟಲ್ಲಿದೆ. ಹೀಗಾಗಿ ಏನೂ ಹೇಳಲು ಆಗುವುದಿಲ್ಲ. ಆದರೆ ಒಂದಂತೂ ಹೇಳಬಲ್ಲೆ ಈ ದುಬಾರಿ ಶುಲ್ಕಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪೂರ್ಣ ಬೆಂಬಲ ಇದೆ". ಇದು ಮಾಜಿ ಪ್ರಧಾನಿ ದೇವೇಗೌಡ ಉವಾಚ. ಶುಲ್ಕದ ಕುರಿತು ಮಾಧ್ಯಮಗಳು ಗೌಡರ ಗಮನಸೆಳೆದಾಗ ಯಡಿಯೂರಪ್ಪನವರ ಮೇಲೆ ಆರೋಪ ಹೊರಿಸಿದರು.

ದೇಶಪಾಂಡೆ: ನೈಸ್ ರಸ್ತೆ ಒಪ್ಪಂದಕ್ಕೆ ಸಹಿಮಾಡುವಾಗ ಸಚಿವರಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಆರ್.ವಿ. ದೇಶಪಾಂಡೆ "ಈ ದರ ನಿಗದಿ ಅವೈಜ್ಞಾನಿಕ" ಎಂದು ಟೀಕಿಸಿದ್ದಾರೆ. ಒಪ್ಪಂದಕ್ಕೆ ಸಹಿಮಾಡುವಾಗ ಶುಲ್ಕ ನಿಗದಿಯಾಗಿಲ್ಲ. ಇಷ್ಟಕ್ಕೂ ಮೂಲ ಒಪ್ಪಂದ ಆದದ್ದು 1995ರಲ್ಲಿ. ಒಪ್ಪಂದವಾಗಿ 13 ವರ್ಷ ಕಳೆದಿದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ದಾಖಲೆಗಳ ಪ್ರಕಾರ ಸರ್ಕಾರದ ಜತೆ ಶುಲ್ಕ ರಿಯಾಯಿತಿ ಒಪ್ಪಂದ ಆದದ್ದು 200ನೇ ಇಸವಿಯಲ್ಲಿ. ಫೆರಿಫೆರಲ್ ಮತ್ತು ಸಂಪರ್ಕ ರಸ್ತೆಗಳ ಕಾಮಗಾರಿ ಪೂರ್ಣಗೊಂಡ ನಂತರ ಶುಲ್ಕ ವಸೂಲಿಗೆ ಮೂಲ ಒಪ್ಪಂದದಲ್ಲಿ ಅವಕಾಶ ಇದೆ. ಆದರೆ, ಕಂಪೆನಿಯೇ ದರ ನಿಗದಿ ಮಾಡಿಕೊಳ್ಳಲು ಸರ್ಕಾರ ಬಿಡಬಾರದು. ಇದಕ್ಕೆ ಪ್ರತ್ಯೇಕ ಸಮಿತಿ ನಿಗದಿಪಡಿಸಬೇಕು ಎಂದು ಹೇಳಿದ್ದಾರೆ.

ಕುಮಾರಸ್ವಾಮಿ: ನೈಸ್ ರಸ್ತೆ ಇಡೀ ದೇಶದಲ್ಲೇ ಹೆಚ್ಚು ಶುಲ್ಕ ವಿಧಿಸಿದೆ. ಖೇಣಿಯವರು ತಮ್ಮದು ದೇಶದಲ್ಲೇ ಉತ್ತಮ ರಸ್ತೆ ಎಂದುಕೊಂಡಿದ್ದಾರೆ. ಆದರೆ ಅದು ಕಳಪೆ ರಸ್ತೆ. ಒಂದು ರೂಪಾಯಿಯನ್ನೂ ಸ್ವಂತ ಬಂಡವಾಳ ಹೂಡದೇ ಕಾಮಗಾರಿ ನಡೆಸಿದ್ದು, ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬ ಹೊರತುಪಡಿಸಿ ಎಲ್ಲ ರಾಜಕಾರಣಿಗಳನ್ನೂ ಖೇಣಿ ಬುಕ್ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರ.

ಸದಾನಂದ ಗೌಡ: ಶುಲ್ಕ ನಿಗದಿ ಇತರ ಎಲ್ಲ ರಸ್ತೆಗಳಿಗಿಂದಲೂ ಹೆಚ್ಚು ಎನ್ನುವುದು ಯಾರಿಗಾದರೂ ಗೊತ್ತಾಗುತ್ತದೆ. ಸಾಮಾನ್ಯ ಜನರಿಗೆ ಇದು ಹೊರೆಯಾಗಲಿದೆ. ಹೀಗಾಗಿ ಸಂಬಂಧಪಟ್ಟ ಸಚಿವರ ಜತೆ ಮಾತನಾಡಿ, ದರ ಪರಿಷ್ಕರಿಸುವಂತೆ ಮನವಿ ಮಾಡುತ್ತೇವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಸ್ನೋಟಿಕರ್, ಆನಂದ್‌ಗೆ ಚುನಾವಣಾಧಿಕಾರಿ ನೋಟೀಸ್
ಅನೂಪ್ ಜತೆ ನಿಶ್ಚಿತಾರ್ಥ ವರದಿ ಸುಳ್ಳು
ಲೋಕಾಯುಕ್ತ ವ್ಯಾಪಕ ದಾಳಿ: 10 ಅಧಿಕಾರಿಗಳು ಬಲೆಗೆ
ಜ. 16ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ
ಚುನಾವಣಾಧಿಕಾರಿಯಾಗಿದ್ದ ಶಿವಪ್ರಸಾದ್ ವರ್ಗಾವಣೆ
ಭೂಗಳ್ಳರ ಮೇಲೆ ಕ್ರಮಕ್ಕೆ ರಾಮಸ್ವಾಮಿ ಆಗ್ರಹ