ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ದಲಿತ ವ್ಯಕ್ತಿ ಪ್ರಧಾನಿಯಾಗಬೇಕು: ಪೇಜಾವರ ಆಶಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಲಿತ ವ್ಯಕ್ತಿ ಪ್ರಧಾನಿಯಾಗಬೇಕು: ಪೇಜಾವರ ಆಶಯ
NRB
ತಮ್ಮ ಜೀವಿತಾವಧಿಯಲ್ಲಿ ದಲಿತ ವ್ಯಕ್ತಿ ಈ ದೇಶದ ಪ್ರಧಾನಿಯಾಗಲಿ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಆಶಿಸಿದ್ದಾರೆ.

ನಗರದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಕಳಂಕವಾಗಿ ಅಂಟಿಕೊಂಡಿರುವ ಅಸ್ಪೃಶ್ಯತೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ತಾಂಡವಾಡುತ್ತಿದೆ. ದಲಿತ ಕೇರಿಗಳಿಗೆ ಹೋದಾಗ ನಮ್ಮ ಕಷ್ಟ ಸುಖ ಕೇಳಲು ಚರ್ಚ್‌ಗಳ ಫಾದರ್ ಗಳು ಬರುತ್ತಾರೆ ಎಂದು ಹೇಳುವುದನ್ನು ಕೇಳಿದ್ದೇನೆ. ಮೇಲ್ವರ್ಗದವರ ಮನಪರಿವರ್ತನೆಯಾಗಬೇಕು ಹಾಗೂ ಇದಕ್ಕೆ ಎಲ್ಲಾ ಸ್ವಾಮೀಜಿಗಳ ನೇತೃತ್ವ ಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಾತಿವಿನಾಶ ಒಬ್ಬನಿಂದ ಸಾಧ್ಯವಿಲ್ಲ. ಅಸ್ಪೃಶ್ಯತೆಯನ್ನು ಜಾತೀಯತೆಯೊಂದಿಗೆ ತಳುಕು ಹಾಕುವುದು ಬೇಡ. ಜಾತಿ ವಿನಾಶವಾದರೂ ಅಸ್ಪೃಶ್ಯತೆ ಉಳಿಯಬಹುದು. ಮೊದಲು ಅಸ್ಪೃಶ್ಯತೆ ನಿವಾರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಜಾತಿ ವಿನಾಶದ ವೇದಿಕೆ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹೋಗದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಮಾಧ್ಯಮದವರ ಮೂಲಕ ಆಹ್ವಾನಿಸಲಾಗಿತ್ತೇ ಹೊರತು ವೈಯಕ್ತಿಕವಾಗಿ ಅಲ್ಲ. ಚರ್ಚೆಗೆ ಆಹ್ವಾನಿಸಿ ಪತ್ರ ಬರೆದರೂ ಆ ವಿಳಾಸದಲ್ಲಿ ಅವರು ದೊರೆಯದೆ ವಾಪಸಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದುಬಾರಿ ಶುಲ್ಕವಸೂಲಿ ಮಾಡುತ್ತಿರುವ ನೈಸ್ ವಿರುದ್ಧ ಆಕ್ರೋಶ
ನೈಸ್ ಫೀಸು: ದುಬಾರಿ ಎಂಬುದೆಲ್ಲರ ಅಭಿಪ್ರಾಯ
ಆಸ್ನೋಟಿಕರ್, ಆನಂದ್‌ಗೆ ಚುನಾವಣಾಧಿಕಾರಿ ನೋಟೀಸ್
ಅನೂಪ್ ಜತೆ ನಿಶ್ಚಿತಾರ್ಥ ವರದಿ ಸುಳ್ಳು
ಲೋಕಾಯುಕ್ತ ವ್ಯಾಪಕ ದಾಳಿ: 10 ಅಧಿಕಾರಿಗಳು ಬಲೆಗೆ
ಜ. 16ರಿಂದ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ