ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ಬೆಂಗಳೂರಿನಲ್ಲಿ ಎನ್ಎಸ್‌ಜಿ ಸ್ಥಾಪನೆಗೆ ಸ್ಥಳ ಶೋಧ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಂಗಳೂರಿನಲ್ಲಿ ಎನ್ಎಸ್‌ಜಿ ಸ್ಥಾಪನೆಗೆ ಸ್ಥಳ ಶೋಧ
ಬೆಂಗಳೂರಿನಲ್ಲಿ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್ (ಎನ್ಎಸ್‌ಜಿ) ಘಟಕ ಸ್ಥಾಪನೆಯಾಗಲಿದೆ. ಮುಂಬೈ ಭಯೋತ್ಪಾದನೆ ದಾಳಿ ನಂತರ ಎನ್ಎಸ್‌ಜಿ ಘಟಕಕ್ಕಾಗಿ ವಿವಿಧ ರಾಜ್ಯಗಳು ಬೇಡಿಕೆ ಇಟ್ಟಿದ್ದವು. ಈಗ ಬೆಂಗಳೂರು ಸೇರಿದಂತೆ ದೇಶದ ಆರು ನಗರಗಳಲ್ಲಿ ಎನ್ಎಸ್‌ಜಿ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಮುಂಬೈ, ಚೆನ್ನೈ, ಹೈದರಾಬಾದ್, ಕೋಲ್ಕತ ಮತ್ತು ಭೋಪಾಲ್ ನಗರಗಳಲ್ಲೂ ಎನ್ಎಸ್‌ಜಿ ಘಟಕಗಳ ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ದೆಹಲಿಯಿಂದ ಆಗಮಿಸಿರುವ ತಂಡವೊಂದು ಬೆಂಗಳೂರಿನಲ್ಲಿ ಕಮಾಂಡೊ ಪಡೆ ಸ್ಥಾಪಿಸಲು ಅಗತ್ಯವಿರುವ ಸ್ಥಳಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಈ ಕಾರ್ಯಕ್ಕೆ ಗೃಹ ಇಲಾಖೆ ನೆರವು ನೀಡುತ್ತಿದೆ.

ದೇಶದ ತಂತ್ರಜ್ಞಾನ ಕೇಂದ್ರವಾದ ಬೆಂಗಳೂರಿನಲ್ಲಿ ಇಸ್ರೋ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಸಂಬಂಧಿತ ಸಂಸ್ಥೆಗಳೂ ಇರುವುದರಿಂದ ಉಗ್ರರು ದಾಳಿ ನಡೆಸಲು ಹೊಂಚು ಹಾಕುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಎನ್ಎಸ್‌ಜಿ ಸ್ಥಾಪಿಸಲು ಕೇಂದ್ರ ಮುಂದಾಗಿದೆ.

ಇತ್ತೀಚೆಗೆ ದೇವಹನಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಅಪಹರಿಸುವ ಬೆದರಿಕೆ ಎದುರಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಯನ್ನೂ ಒದಗಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದಲಿತ ವ್ಯಕ್ತಿ ಪ್ರಧಾನಿಯಾಗಬೇಕು: ಪೇಜಾವರ ಆಶಯ
ದುಬಾರಿ ಶುಲ್ಕವಸೂಲಿ ಮಾಡುತ್ತಿರುವ ನೈಸ್ ವಿರುದ್ಧ ಆಕ್ರೋಶ
ನೈಸ್ ಫೀಸು: ದುಬಾರಿ ಎಂಬುದೆಲ್ಲರ ಅಭಿಪ್ರಾಯ
ಆಸ್ನೋಟಿಕರ್, ಗಾಂವ್ಕರ್‌ಗೆ ಚುನಾವಣಾಧಿಕಾರಿ ನೋಟೀಸ್
ಅನೂಪ್ ಜತೆ ನಿಶ್ಚಿತಾರ್ಥ ವರದಿ ಸುಳ್ಳು
ಲೋಕಾಯುಕ್ತ ವ್ಯಾಪಕ ದಾಳಿ: 10 ಅಧಿಕಾರಿಗಳು ಬಲೆಗೆ